Friday, May 17, 2024
spot_imgspot_img
spot_imgspot_img

ಬಂಟ್ವಾಳ: ರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ; ಗಾಂಜಾ ಸಹಿತ ಆರೋಪಿಯ ಬಂಧನ..!

- Advertisement -G L Acharya panikkar
- Advertisement -

ಬಂಟ್ವಾಳ: ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಎಸ್. ಐ. ಅವಿನಾಶ್ ನೇತೃತ್ವದ ತಂಡ ಆರೋಪಿ ಸಹಿತ ಸಾವಿರಾರು ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.

vtv vitla
vtv vitla

ಸಜೀಪ ನಡು ಗ್ರಾಮದ ಕಂಚಿನಡ್ಕ ಪದವು ನಿವಾಸಿ ಶೇಖಬ್ಬ ಅವರ ಮಗ ಸಿದ್ದೀಕ್ ಯಾನೆ ಕೋಳಿ ಸಿದ್ದೀಕ್(36) ಬಂಧಿತ ಆರೋಪಿ. ಆರೋಪಿ‌ತನಿಂದ ಸುಮಾರು 80 ಸಾವಿರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 2 ಸಾವಿರ ಮೌಲ್ಯದ ಗಾಂಜಾ, 60 ಸಾವಿರ ರೂ ಮೌಲ್ಯದ ರಿಕ್ಷಾ 1260 ನಗದು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಸಜೀಪ ಮೂಡ ಗ್ರಾಮದ ಬೇಂಕ್ಯೆ ಸಮೀಪದ ಬರ್ಕೆ ಎಂಬಲ್ಲಿ ಆರೋಪಿ ಗಾಂಜಾ ಮಾರಾಟ ಮಾಡುವ ಬಗ್ಗೆ ಪೊಲೀಸರಿಗೆ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ್ದಾರೆ. ಆರೋಪಿ ಬರ್ಕೆ ಎಂಬಲ್ಲಿ ರಿಕ್ಷಾ ದಲ್ಲಿ ಗಾಂಜಾ ದಾಸ್ತಾನು ಇರಿಸಿ ಗಿರಾಕಿಗಳಿಗೆ ಮಾರಾಟಕ್ಕಾಗಿ ನಿಂತಿದ್ದ. ಪೋಲೀಸರು ಜೀಪ್ ನಲ್ಲಿ ಬರುವುದನ್ನು ಗಮನಿಸಿ ರಿಕ್ಷಾ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಪೋಲೀಸರು ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ ದಾಗ ಆತನ ರಿಕ್ಷಾದಲ್ಲಿ ಇರಿಸಲಾಗಿದ್ದ ಗಾಂಜದ ಬಗ್ಗೆ ಮಾಹಿತಿ ನೀಡಿದ್ದಾನೆ.ಅಲ್ಲದೆ ಉಪ್ಪಳ ಕಡೆಯಿಂದ ಗಾಂಜಾನವನ್ನು ತಂದು ಪ್ಯಾಕೆಟ್ ಗಳನ್ನಾಗಿ ಮಾಡಿ ಗಿರಾಕಿಗಳಿಗೆ ಮಾರಾಟ ‌ಮಾಡುವ ಬಗ್ಗೆ ಆತ ಪೋಲೀಸರಿಗೆ ಮಾಹಿತಿ ನೀಡಿದ್ದಾನೆ.

ಆರೋಪಿಯನ್ನು ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಂಗಳೂರು ಎಸ್.ಪಿ.ಹೃಷಿಕೇಶ್ ಸೋನಾವಣೆ ಹಾಗೂ ಬಂಟ್ವಾಳ ಡಿ.ವೈ.ಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್ ಅವರ ಮಾರ್ಗದರ್ಶನ ದಲ್ಲಿ ಬಂಟ್ವಾಳ ನಗರ ಠಾಣಾ ಪೋಲಿಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನೇತ್ರತ್ವದ ಲ್ಲಿ ನಗರ ಠಾಣಾ ಎಸ್ .ಐ.ಅವಿನಾಶ್ ಅವರ ತಂಡ ಆರೋಪಿಯನ್ನು ಬಂಧಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!