Monday, April 29, 2024
spot_imgspot_img
spot_imgspot_img

ಬಂಟ್ವಾಳ: ಸರಪಾಡಿ ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ-ಸ್ಥಳೀಯರ ಆಕ್ರೋಶ; ತನಿಖೆ ನಡೆಸಲು ಶಾಸಕ ರಾಜೇಶ್ ನಾೖಕ್‌ ಸೂಚನೆ

- Advertisement -G L Acharya panikkar
- Advertisement -

ಬಂಟ್ವಾಳ : ತಾಲೂಕಿನ ಸರಪಾಡಿ ಗ್ರಾಮದ ಪೆರಿಯಪಾದೆ ಅರಸೋಲಿಗೆ ರಸ್ತೆ ಕಾಮಗಾರಿ ಗುಣಮಟ್ಟದ ಕುರಿತು ತನಿಖೆ ನಡೆಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾೖಕ್‌, ಜಿಲ್ಲಾಧಿಕಾರಿ ಮತ್ತು ಜಿ.ಪಂ ಇಂಜಿನಿಯರಿಂಗ್ ವಿಭಾಗಕ್ಕೆ ಸೂಚಿಸಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಪಾಡಿ – ಪೆರಿಯಪಾದೆ ಅರಸೋಲಿಗೆ ರಸ್ತೆಗೆ ಡಾಂಬರೀಕರಣ ಕಾರ್ಯದ ಪರಿಶೀಲನೆ ನಡೆಸಿ ವರದಿ ನೀಡಿ ಎಂದು ಹೇಳಿದ್ದಾರೆ. ಸರಪಾಡಿ ಪೆರಿಯಪಾದೆ- ಅರಸೋಲಿಗೆ ರಸ್ತೆಗೆ ಜಿ.ಪಂ.ಟಾಸ್ಕ್‌ ಫೋರ್ಸ್ ನ ಮೂಲಕ 5 ಲಕ್ಷ ಅನುದಾನವನ್ನು ಮಂಜೂರುಗೊಳಿಸಲಾಗಿತ್ತು. ಎ.8ರಂದು ಗುರುವಾರ ಡಾಂಬರು ಹಾಕುವ ಕಾರ್ಯ ನಡೆಸಲಾಗಿತ್ತು. ಆದರೆ ಇದರ ಗುಣಮಟ್ಟದ ಬಗ್ಗೆ ಇಲ್ಲಿನ ಗ್ರಾಮಸ್ಥರಿಗೆ ಸಂಶಯ ಬಂದಿದ್ದು, ಬಂಟ್ವಾಳ ಶಾಸಕರಿಗೆ ದೂರು ನೀಡಿದ್ದರು.

ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಶಾಸಕರು ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಜಿ.ಪಂ.ಇಂಜಿನಿಯರಿಂಗ್ ವಿಭಾಗದ ಈ ರಸ್ತೆಯನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದಲ್ಲದೆ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಗುತ್ತಿಗೆದಾರ ಮೇಲೆ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

- Advertisement -

Related news

error: Content is protected !!