Wednesday, May 15, 2024
spot_imgspot_img
spot_imgspot_img

ಬಂಟ್ವಾಳ: NIA ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದೆ – ತನಿಖೆ ಪಾರದರ್ಶಕವಾಗಿರಲಿ: ರಿಯಾಜ್ ಫರಂಗಿಪೇಟೆ ಕಿಡಿ

- Advertisement -G L Acharya panikkar
- Advertisement -

ಬಂಟ್ವಾಳ: ಎನ್ ಐಎ ತನಿಖಾ ಸಂಸ್ಥೆ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದೆ ಎಂದು ಎಸ್ ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಕಿಡಿ ಕಾರಿದ್ದಾರೆ. ಎನ್ ಐಎ ದಾಳಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಿಯಾಝ್ ಫರಂಗಿಪೇಟೆ, ಜುಲೈ ಪ್ರಕರಣ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಹಲವು ಪ್ರಶ್ನೆ ಕೇಳಿದ್ದಾರೆ. ಹಲವು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಎನ್ ಐ ಎ ತನಿಖೆ ಪಾರದರ್ಶಕ ವಾಗಿರಲಿ ಎಂದರು.

ಎನ್ ಐಎ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿದೆ.ನಾನು ಬಿಹಾರದಲ್ಲಿ ಎಸ್ ಡಿಪಿಐ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದೇನೆ. ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಲ್ಲಿರೋದರಿಂದ ಬಿಹಾರ ರಾಜ್ಯ ಸಮಿತಿ ಮೀಟಿಂಗ್ ನಲ್ಲಿ ಭಾಗವಹಿಸುತ್ತಿದ್ದೆ. ಪ್ರಧಾನಿ ಮೋದಿ ಕಾರ್ಯಕ್ರಮ ದಲ್ಲಿ ಗಡಿಬಿಡಿ ಮಾಡುವ ಊಹಾಪೋಹದಿಂದ ಬಿಹಾರದಲ್ಲಿ ಪಕ್ಷದ ಐದು ಮಂದಿಯನ್ನು ಬಂಧನ ಮಾಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಪೂರಕ ಪರಿಶೀಲನೆ ಮಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನೂ ಬಂಧನ ಮಾಡಿದ್ದರು.

2047 ಇಸ್ಲಾಂ ರಾಷ್ಟ್ರ ಸಂಬಂಧ ಪಟ್ಟಂತೆ ಫೌಂಡೇಶನ್ ಬುಕ್ ಲೇಟ್ ಬಿಡುಗಡೆ ಮಾಡಿತ್ತು. ಈ ಬಗ್ಗೆ ಸಂಬಂಧಪಟ್ಟ ಸಂಘಟನೆ ಹೇಳಿಕೆ ನೀಡಿದೆ. ಪಿಎಫ್ ಐ ಕೂಡಾ ಇದರ ಬಗ್ಗೆ ಸ್ಪಷ್ಟನೆ ನೀಡಿದೆ. ಉ.ಪ್ರದೇಶದಲ್ಲಿ ಆದ ಬುಕ್ ಲೇಟ್ ನ ಒಂದು ಕಾಪಿಯನ್ನು ಈ ಬುಕ್ ಲೇಟ್ ಗೆ ಇಡಲಾಗಿತ್ತು. ಕೇಂದ್ರ ಸರ್ಕಾರ ಪ್ರೇರಿತವಾಗಿ ಈ ಕಾರ್ಯ ಮಾಡಲಾಗಿತ್ತು ಎಂದರು. ಎನ್ ಐ ಎ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆ ಕೇಳಿತ್ತು. ಮುಂದೆಯೂ ತನಿಖೆಗೆ ಸಹಕಾರ ನೀಡುತ್ತೇನೆ. ನನ್ನ ಮತ್ತು ನನ್ನ ಪತ್ನಿಯ ಮೊಬೈಲ್ ನ್ನು ಎನ್ ಐ ಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನಿವಾಸದ ಮೇಲೆ ಎನ್ ಐಎ ದಾಳಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಿಯಾಝ್ ಫರಂಗಿಪೇಟೆ, ಜುಲೈ ಪ್ರಕರಣ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಹಲವು ಪ್ರಶ್ನೆ ಕೇಳಿದ್ದಾರೆ. ಹಲವು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಎನ್ ಐ ಎ ತನಿಖೆ ಪಾರದರ್ಶಕ ವಾಗಿರಲಿ ಎಂದರು.

ಮಂಗಳೂರು: ಮೋದಿ ಹತ್ಯೆಗೆ ಸ್ಕೆಚ್ ಹಾಕಿದವರ ಜೊತೆ ರಿಯಾಜ್ ಫರಂಗಿಪೇಟೆ ನಂಟು.!? https://bit.ly/3KZVUnB

ಎನ್ ಐಎ ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿದೆ.ನಾನು ಬಿಹಾರದಲ್ಲಿ ಎಸ್ ಡಿಪಿಐ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದೇನೆ. ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಲ್ಲಿರೋದರಿಂದ ಬಿಹಾರ ರಾಜ್ಯ ಸಮಿತಿ ಮೀಟಿಂಗ್ ನಲ್ಲಿ ಭಾಗವಹಿಸುತ್ತಿದ್ದೆ. ಪ್ರಧಾನಿ ಮೋದಿ ಕಾರ್ಯಕ್ರಮ ದಲ್ಲಿ ಗಡಿಬಿಡಿ ಮಾಡುವ ಊಹಾಪೋಹದಿಂದ ಬಿಹಾರದಲ್ಲಿ ಪಕ್ಷದ ಐದು ಮಂದಿಯನ್ನು ಬಂಧನ ಮಾಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಪೂರಕ ಪರಿಶೀಲನೆ ಮಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನೂ ಬಂಧನ ಮಾಡಿದ್ದರು.

2047 ಇಸ್ಲಾಂ ರಾಷ್ಟ್ರ ಸಂಬಂಧ ಪಟ್ಟಂತೆ ಫೌಂಡೇಶನ್ ಬುಕ್ ಲೇಟ್ ಬಿಡುಗಡೆ ಮಾಡಿತ್ತು. ಈ ಬಗ್ಗೆ ಸಂಬಂಧಪಟ್ಟ ಸಂಘಟನೆ ಹೇಳಿಕೆ ನೀಡಿದೆ. ಪಿಎಫ್ ಐ ಕೂಡಾ ಇದರ ಬಗ್ಗೆ ಸ್ಪಷ್ಟನೆ ನೀಡಿದೆ. ಉ.ಪ್ರದೇಶದಲ್ಲಿ ಆದ ಬುಕ್ ಲೇಟ್ ನ ಒಂದು ಕಾಪಿಯನ್ನು ಈ ಬುಕ್ ಲೇಟ್ ಗೆ ಇಡಲಾಗಿತ್ತು. ಕೇಂದ್ರ ಸರ್ಕಾರ ಪ್ರೇರಿತವಾಗಿ ಈ ಕಾರ್ಯ ಮಾಡಲಾಗಿತ್ತು ಎಂದರು. ಎನ್ ಐ ಎ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆ ಕೇಳಿತ್ತು. ಮುಂದೆಯೂ ತನಿಖೆಗೆ ಸಹಕಾರ ನೀಡುತ್ತೇನೆ. ನನ್ನ ಮತ್ತು ನನ್ನ ಪತ್ನಿಯ ಮೊಬೈಲ್ ನ್ನು ಎನ್ ಐ ಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

- Advertisement -

Related news

error: Content is protected !!