Sunday, April 28, 2024
spot_imgspot_img
spot_imgspot_img

ಬಯಲು ಬರ್ಹಿದೆಸೆಗೆಂದು ಹೋದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ

- Advertisement -G L Acharya panikkar
- Advertisement -

ಬಯಲು ಬರ್ಹಿದೆಸೆಗೆಂದು ಮಹಿಳೆಯೊಬ್ಬರು ಮನೆಯಿಂದ ಆಚೆ ಹೋಗಿದ್ದನ್ನು ಗಮನಿಸಿದ ಗ್ರಾಮದ ವ್ಯಕ್ತಿಯೋರ್ವ ಮಾನವೀಯತೆಯಿಲ್ಲದೆ ಮೃಗದಂತೆ ವರ್ತಿಸಿ ಗೃಹಿಣಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಚಿಕ್ಕಬಳ್ಳಾಫುರ ಜಿಲ್ಲೆಯ ಚಿಂತಾಮಣಿ ಗ್ರಾಮದಲ್ಲಿ ನಡೆದಿದೆ.

ಬಯಲು ಬರ್ಹಿದೆಸೆಗೆಂದು ಮಹಿಳೆಯೊಬ್ಬರು ಮನೆಯಿಂದ ಆಚೆ ಹೋಗಿದ್ದನ್ನು ಗಮನಿಸಿದ ಗ್ರಾಮದ ವ್ಯಕ್ತಿಯೋರ್ವ ಮಾನವೀಯತೆಯಿಲ್ಲದೆ ಮೃಗದಂತೆ ವರ್ತಿಸಿ ಗೃಹಿಣಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.32 ವರ್ಷದ ಗೃಹಿಣಿ ಸಂಜೆ 5ಗಂಟೆ ಸಮಯದಲ್ಲಿ ಊರಾಚೆ ಇರುವ ರಸ್ತೆ ಬದಿ ಬಯಲು ಬರ್ಹಿದೆಶೆಗೆ ಹೋಗಿದ್ದಳು. ಆಗ ಪರಿಚಿತ ವ್ಯಕ್ತಿ ಮಹಿಳೆಯನ್ನು ನೋಡಿದ್ದೇ ತಡ ಕೀಚಕನಂತೆ ಮಹಿಳೆಯ ಸೀರೆಯನ್ನು ಎಳೆದಾಡಿ ಆಕೆಯ ಖಾಸಗಿ ಅಂಗಾಂಗಗಳನ್ನು ಮುಟ್ಟಿ ವಿಕೃತವಾಗಿ ವರ್ತಿಸಿದ್ದಾನೆ.ಇನ್ನು ಈ ವೇಳೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ರೂ ಆಕೆಯನ್ನು ಗಟ್ಟಿಯಾಗಿ ಹಿಡಿದು ಎಳೆದಾಡಿ ವಿಕೃತಿ ಮೆರೆದು ಮಾನಭಂಗ ಮಾಡಿದ್ದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ನಂತರ ದಾರಿಹೋಕರು ಬರುತ್ತಿರುವುದನ್ನು ಗಮನಿಸಿದ ಪರಿಚಿತ ವ್ಯಕ್ತಿ, ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 341, 354(ಬಿ) 504, 506 ಸೆಕ್ಷನ್‍ಗಳಡಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!