Friday, May 3, 2024
spot_imgspot_img
spot_imgspot_img

ಬರೊಬ್ಬರಿ 22 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಮಗಳು

- Advertisement -G L Acharya panikkar
- Advertisement -
vtv vitla
vtv vitla

ಚಿಕ್ಕಮಗಳೂರು: 22 ವರ್ಷಗಳ ನಂತರ ಮಗಳು ತಾಯಿಯ ಮಡಿಲು ಸೇರಿದ ಘಟನೆಯೊಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲಿ ನಡೆದಿದೆ. 9ನೇ ವಯಸ್ಸಲ್ಲಿ ನಾಪತ್ತೆಯಾಗಿದ್ದ ಮಗಳು ಅಂಜಲಿ, ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಕೇರಳದ ನೆಲ್ಲಮಣಿಯ ಸಾಜಿ ಜತೆ ವಿವಾಹವಾಗಿದ್ದಾರೆ.

ಕಳೆದ 3 ವರ್ಷದಿಂದ ಅಂಜಲಿ ತನ್ನ ತಾಯಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ಮೂಡಿಗೆರೆಯ ಮುದ್ರೆಮನೆಯಲ್ಲಿ ತಾಯಿ ಪತ್ತೆಯಾಗಿದ್ದು,ಭೇಟಿಯಾಗುತ್ತಿದ್ದಂತೆ ತಾಯಿ, ಮಗಳು ಪರಸ್ಪರ ತಬ್ಬಿ ಕಣ್ಣೀರಿಟ್ಟಿದ್ದಾರೆ.

vtv vitla
vtv vitla

9ನೇ ವಯಸ್ಸಿನಲ್ಲಿ ಅಂಜಲಿ ಕಾಣೆಯಾಗಿದ್ದರು. ಆದರೆ ತಂದೆ- ತಾಯಿ ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರಲಿಲ್ಲ. ನಾಲ್ಕು ವರ್ಷಗಳ ಹಿಂದೆ ಅಂಜಲಿ ತಂದೆ ಮೃತಪಟ್ಟಿದ್ದು, ಆಕೆಯ ತಾಯಿ ಮಾಹಿತಿ ನೀಡಿದ್ದಾರೆ.

ತಾಯಿ ಕಣ್ಣಿಗೆ ಬೀಳುತ್ತಿದ್ದಂತೆ ಅಂಜಲಿ ಓಡಿ ಹೋಗಿ ಅಪ್ಪಿಕೊಂಡಿದ್ದಾರೆ. ಹೆತ್ತಮ್ಮನನ್ನು ಕಂಡ ಖುಷಿಯಲ್ಲಿ ಮಗಳು ಮತ್ತು ಕಾಣೆಯಾಗಿದ್ದ ಮಗಳನ್ನ ಕಂಡ ತಾಯಿ ಒಬ್ಬೊರನ್ನು ಗಟ್ಟಿಯಾಗಿ ತಬ್ಬಿ ಕಣ್ಣೀರಿಟ್ಟಿದ್ದಾರೆ. ತಾಯಿ ಮಗಳ ಈ ದೃಶ್ಯ ಮನಕಲಕುವಂತಿದೆ.

vtv vitla
vtv vitla
- Advertisement -

Related news

error: Content is protected !!