Tuesday, May 7, 2024
spot_imgspot_img
spot_imgspot_img

ಬರೋಬ್ಬರಿ 41,000 ರೂ ಬೆಲೆಯ ಟಿ-ಶರ್ಟ್‌ ಧರಿಸಿ ರಾಹುಲ್ ಗಾಂಧಿ ಜೋಡೋ ಯಾತ್ರೆಯಲ್ಲಿ ಭಾಗಿ; ಭಾರತ್ ದೆಖೋ ಎಂದು ಕಾಲೆಳೆದ ಬಿಜೆಪಿಗೆ ತಿರುಗೇಟು ಕೊಟ್ಟ ಕಾಂಗ್ರೆಸ್‌

- Advertisement -G L Acharya panikkar
- Advertisement -
astr

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬರೋಬ್ಬರಿ 41,000 ರೂಪಾಯಿಗಳಿಗೂ ಹೆಚ್ಚು ಬೆಲೆಯ ಬರ್ಬೆರಿ ಟಿ-ಶರ್ಟ್ ಧರಿಸಿದ್ದರಿಂದ ರಾಹುಲ್ ಅವರನ್ನು ಬಿಜೆಪಿ ಕಾಲೆಳೆದಿದೆ. ಟ್ವೀಟ್‌ ಮೂಲಕ ರಾಹುಲ್‌ ಗಾಂಧಿ ಕುಟುಕಿದ ಬಿಜೆಪಿ, ಪ್ರಸ್ತುತ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಯಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕನನ್ನ ತರಾಟೆಗೆ ತೆಗೆದುಕೊಂಡಿದೆ.

ಬಿಳಿ ಬಣ್ಣದ ಬುರ್ಬೆರಿ ಟಿ-ಶರ್ಟ್ ಧರಿಸಿದ ರಾಹುಲ್ ಗಾಂಧಿ ಅವ್ರ ಚಿತ್ರವನ್ನ ಬಿಜೆಪಿ ಹಂಚಿಕೊಂಡಿದ್ದು, ‘ಭಾರತ್, ದೇಖೋ’ ಎಂಬ ಶೀರ್ಷಿಕೆಯೊಂದಿಗೆ ಟಿ-ಶರ್ಟ್‌ನ ವೆಚ್ಚವನ್ನು ಸಹ ಪೋಸ್ಟ್ ಮಾಡಿದೆ. ಇನ್ನು ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ‘ಪ್ರಧಾನಿ ನರೇಂದ್ರ ಮೋದಿ ಅವರ ಸೂಟ್ ಬೆಲೆ 10 ಲಕ್ಷ ರೂಪಾಯಿ’ ಎಂದು ತಿರುಗೇಟು ನೀಡಿದೆ.

‘ಏಯ್… ನಿಮಗೆ ಭಯವಾಗುತ್ತಿದೆಯೇ? ‘ಭಾರತ್ ಜೋಡೋ ಯಾತ್ರೆ’ಯಲ್ಲಿ ನೆರೆದಿದ್ದ ಜನಸಮೂಹವನ್ನು ನೋಡಿ. ಈ ವಿಷಯದ ಬಗ್ಗೆ ಮಾತನಾಡಿ… ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡಿ. ನಾವು ಉಳಿದ ಬಟ್ಟೆಗಳ ಬಗ್ಗೆ ಚರ್ಚಿಸಬೇಕಾದರೆ, ಮೋದಿ ಅವ್ರ 10 ಲಕ್ಷ ಬೆಲೆಯ ಸೂಟ್ ಮತ್ತು 1.5 ಲಕ್ಷದ ಕನ್ನಡಕದ ಬಗ್ಗೆ ಮಾತನಾಡಬೇಕಾಗುತ್ತದೆ’ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

- Advertisement -

Related news

error: Content is protected !!