

ಬೆಂಗಳೂರು: ಬಾಂಗ್ಲಾ ದೇಶದಿಂದ ಬಂದು, ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಮಹಿಳೆಯೊಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ಭಾರತೀಯ ಪೌರತ್ವ ಪಡೆದಿದ್ದ ಮಹಿಳೆಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರೋನಿ ಬೇಗಂ 2006 -2007 ರಲ್ಲಿ ಅಕ್ರಮವಾಗಿ ಗಡಿ ನುಸುಳಿ ಭಾರತದೊಳಕ್ಕೆ ಪ್ರವೇಶಿಸಿದ್ದಳು. ಮುಂದೆ.. ರೋನಿ ಬೇಗಂ 2015 ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದಳು.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದ ಸದರಿ ವಿದೇಶಿ ಮಹಿಳೆ, ನೀತಿನ್ ಕುಮಾರ್ ಎಂಬಾತನನ್ನು ಮುಂಬೈನಲ್ಲಿ ವಿವಾಹವಾಗಿದ್ದಳು. ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ ರೋನಿ ಬೇಗಂ ತನ್ನ ಹೆಸರು ಬದಲಿಸಿಕೊಂಡಿದ್ದಳು. ಪಾಯಲ್ ಗೋಷ್ ಎಂದು ಆಕೆಗೆ ಮರು ನಾಮಕರಣವಾಗಿತ್ತು. ನಕಲಿ ದಾಖಲೆ ಕೊಟ್ಟು ಭಾರತದ ಪ್ರಜೆಯಾಗಿ ದಾಖಲೆ ಮಾರ್ಪಾಡು ಮಾಡಿಕೊಂಡಿದ್ದಳು. ಬಾಂಗ್ಲಾಗೆ ಪ್ರಯಾಣ ಮಾಡುವಾಗ ಏರ್ ಪೋರ್ಟ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಳೆ.
ನಕಲಿ ದಾಖಲೆ ಮುಖಾಂತರ ಓಟರ್ ಐಡಿ, ಆಧಾರ್ ಕಾರ್ಡ್ ಸಹ ರೋನಿ ಬೇಗಂ ಯಾನಿ ಪಾಯಲ್ ಗೋಷ್ ಪಶ್ಚಿಮ ಬಂಗಾಳದ ಏರ್ ಪೋರ್ಟ್ ನಲ್ಲಿ ಲಾಕ್ ಆಗಿದ್ದಾಳೆ. FRRO ಸೂಚನೆ ಮೇರೆಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಒಂದೂವರೆ ವರ್ಷದ ನಂತರ ರೋನಿ ಬೇಗಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ರೋನಿ ಬೇಗಂ ಯಾನಿ ಪಾಯಲ್ ಗೋಷ್ ಎಂಬ ಈ ಮಹಿಳೆಗೆ ಅಕ್ರಮವಾಗಿ ದಾಖಲಾತಿ ಮಾಡಿಕೊಟ್ಟವರನ್ನೂ ಬೆಂಗಳೂರು ಪೊಲೀಸರು ಹುಡುಕಾಟ ನಡೆಸಿದ್ದಾರೆ.

