Sunday, June 7, 2026
spot_imgspot_img
spot_imgspot_img

ಬಿಳಿಗಿರಿರಂಗನ ಬೆಟ್ಟದಲ್ಲಿ ಮೊದಲ ಬಾರಿಗೆ ಹೊಸ ರೀತಿಯ ಕೀಟ ಪತ್ತೆ

- Advertisement -
- Advertisement -

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ‌ ಬಿಳಿಗಿರಿರಂಗನ‌ ಬೆಟ್ಟದಲ್ಲಿಇದೇ ಮೊದಲ ಬಾರಿಗೆ ಹೊಸ ಬಗೆಯ ‘ಕಣಜ'(ಕಡಜ)ವು ಪತ್ತೆಯಾಗಿದೆ.

ಏಟ್ರಿಯ ಕೀಟಶಾಸ್ತ್ರಜ್ಞರಾದ ಡಾ.ಎ.ಪಿ.ರಂಜನ್ ಹಾಗೂ ಡಾ.ಪ್ರಿಯದರ್ಶನ್ ಧರ್ಮರಾಜನ್ ಎಂಬವರು ಹೊಸ ಬಗೆಯ ಪರವಾಲಂಬಿ ಕಣಜ ಪತ್ತೆ ಹಚ್ಚಿ ಯೂರೋಪಿಯನ್ ಜರ್ನಲ್ ಆಫ್ ಟ್ಯಾಕ್ಸನಮಿಯಲ್ಲಿ ಪ್ರಕಟಿಸಿದ್ದಾರೆ. ಜೀವ ವೈವಿಧ್ಯತೆಗೆ ಸಾಕ್ಷಿಯಾಗಿರುವ ಸಮುದಾಯದ ಹೆಸರಾದ ‘ಸೋಲಿಗ’ ಎಂದು ಹೆಸರಿಡಲಾಗಿದೆ. 15 ವರ್ಷಗಳ ಹಿಂದೆ ನಾಗಲ್ಯಾಂಡ್ ನಲ್ಲಿ ಈ ಪರಾವಲಂಬಿ ಕೀಟ ಮೊದಲ ಬಾರಿ ಪತ್ತೆಯಾಗಿತ್ತು. ಬಳಿಕ ಈಗ ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಣಿಸಿಕೊಂಡಿದೆ.

- Advertisement -

Related news

error: Content is protected !!