Tuesday, May 21, 2024
spot_imgspot_img
spot_imgspot_img

ಬಿ.ಸಿ.ರೋಡ್: ದ.ಕ ಜಿಲ್ಲಾ ಜೆಡಿಎಸ್ ಮುಸ್ಲಿಂ ಮುಖಂಡರ ಪ್ರತಿನಿಧಿ ಸಮಾವೇಶ; ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಜನತೆಗೆ ರಾಜಕೀಯವಾಗಿ ವಿಶೇಷ ಸ್ಥಾನಮಾನ ಕಲ್ಪಿಸಿರುವ ಪಕ್ಷವಿದ್ದರೆ ಅದು ಜೆಡಿಎಸ್ ಪಕ್ಷ ಮಾತ್ರ; ಬಿ. ಮುಹಮ್ಮದ್ ಕುಂಞಿ ವಿಟ್ಲ

- Advertisement -G L Acharya panikkar
- Advertisement -
suvarna gold

ಬಿ.ಸಿ.ರೋಡ್: ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಜನತೆಗೆ ರಾಜಕೀಯವಾಗಿ ವಿಶೇಷ ಸ್ಥಾನಮಾನ ಕಲ್ಪಿಸಿರುವ ಪಕ್ಷವಿದ್ದರೆ ಅದು ಜೆಡಿಎಸ್ ಪಕ್ಷ ಮಾತ್ರ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ.ಮಮುಹಮ್ಮದ್ ಕುಂಞ ಹೇಳಿದರು.

ಬಿ.ಸಿ. ರೋಡಿನಲ್ಲಿ ಮಂಗಳವಾರ ನಡೆದ ಜೆಡಿಎಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಮುಖಂಡರ ಪ್ರತಿನಿಧಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಆಗುತ್ತಿರುವ ಅನ್ಯಾಯ, ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಟಿಯಿಂದ ನಾವೆಲ್ಲರೂ ಎಲ್ಲಾ ರೀತಿಯ ಭಿನ್ನಾಭಿಪ್ರಾಯ ಗಳನ್ನು ಬದಿಗಿಟ್ಟು ಒಗ್ಗಟ್ಟಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸ ಬೇಕು ಎಂದು ಕರೆ ನೀಡಿದರು.

vtv vitla
vtv vitla

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ಮುಸ್ಲಿಮ್ ಪ್ರತಿನಿಧಿ ಸಭೆ ಸ್ವಾಗತ ಸಮಿತಿ ಅಧ್ಯಕ್ಷ ಮೊಹಮ್ಮದ್ ಶಫಿ ಮಾತನಾಡಿ ಪಕ್ಷದೊಳಗೆ ಯಾವುದೇ ಅಸಮಾಧಾನ, ಗೊಂದಲಗಳಿದ್ದರೂ ಎಲ್ಲವನ್ನೂ ಬದಿಗಿಟ್ಟು ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಲು ಮುಸ್ಲಿಂ ನಾಯಕರು ಸಿದ್ದರಾಗಬೇಕು ಈ ಪ್ರತಿನಿಧಿ ಸಮಾವೇಶದ ಮೂಲಕ ಜಿಲ್ಲೆಯ ಮುಸ್ಲಿಂ ಸಮುದಾಯದ ಸಮಸ್ಯೆಗಳ ಬಗ್ಗೆ ಪಕ್ಷದ ಹಿರಿಯ ನಾಯಕರೊಂದಿಗೆ ಹಕ್ಕೊತ್ತಾಯ ಮಂಡಿಸಬೇಕು ಸಬೇಕು ಎಂದರು.

ಪಕ್ಷದ ಹಿರಿಯ ಮುಖಂಡ ಎ.ಎ.ಹೈದರ್ ಪರ್ತಿಪ್ಪಾಡಿ, ಪ್ರಮುಖರಾದ ಇಬ್ರಾಹಿಂ ಗೋಳಿಕಟ್ಟೆ, ಡಿ.ಪಿ. ಹಮ್ಮಬ್ಬ, ಅಶ್ರಫ್ ಕಲ್ಲೆಗ, ಅಝೀಝ್ ಮಲಾರ್, ಇಕ್ಬಾಲ್ ಮುಲ್ಕಿ, ಅಶ್ರಫ್ ಕೋಝಿಖಾನ್ ಇಕ್ಬಾಲ್ ಎಲಿಮಲೆ, ಮೊದಲಾದವರು ಮಾತನಾಡಿದರು.

vtv vitla

ಅಬೂಬಕ್ಕರ್ ಅಮ್ಮುಂಜೆ, ಲತೀಫ್ ವಳಚ್ಚಿಲ್, ಜಾಫರ್ ಖಾನ್ ವಿಟ್ಲ, ರಾಶ್ ಬ್ಯಾರಿ, ನಜೀರ್ ಸಾಮಾನಿಗೆ, ಅಬೂಬಕರ್ ಪರಂಗಿಪೇಟೆ, ಸೈಯದ್ ಮೀರಾ ಸಾಹೇಬ್ ಕಡಬ, ಹಕೀಂ ವಾಮಂಜೂರು, ಹಂಝ ಕಬಕ ಹಾಗೂ ಪಕ್ಷದ ಹಲವಾರು ಜಿಲ್ಲಾ ಮುಖಂಡರು ಭಾಗವಹಿಸಿದ್ದರು.

ಇದೇ ವೇಳೆ ಉಳ್ಳಾಲ ನಗರಸಭಾ ಸದಸ್ಯರಾದ ಖಲೀಲ್ ಉಳ್ಳಾಲ, ಜಬ್ಬಾರ್ ಉಳ್ಳಾಲ ,ಬಶೀರ್ ಉಳ್ಳಾಲ ಮತ್ತು ಕುಪ್ಪೆಪ್ಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.ಪಿ ಹಮ್ಮಬ್ಬ, ಗ್ರಾಮ ಪಂಚಾಯತ್ ಸದಸ್ಯ ರಿಯಾಝ್ ಮತ್ತು ಜೆಡಿಎಸ್ ಎನ್ನಾರೈ ಹಿರಿಯ ನಾಯಕ ಅಶ್ರಫ್ ಕೋಝಿ ಖಾನ್ ಇವರನ್ನು ಸನ್ಮಾನಿಸ ಲಾಯಿತು ಮತ್ತು ಹಲವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಳಿಸಲಾಯಿತು.

ಕಾರ್ಯಕ್ರಮ ಆಯೋಜಕ ಹಾರೂನ್ ರಶೀದ್ ಬಂಟ್ವಾಳ ಸ್ವಾಗತಿಸಿ, ವಂದಿಸಿದರು. ಪಕ್ಷದ ಯುವ ಮುಖಂಡ ಸವಾಝ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

vtv vitla
vtv vitla
- Advertisement -

Related news

error: Content is protected !!