Friday, May 10, 2024
spot_imgspot_img
spot_imgspot_img

ಬೆಂಗಳೂರಿನ ವುಡ್ ಕಟ್ ಪ್ರಿಂಟ್ ಪ್ರದರ್ಶನದಲ್ಲಿ ವಿಟ್ಲದ ಪ್ರತಿಭೆಗಳು ಭಾಗಿ!

- Advertisement -G L Acharya panikkar
- Advertisement -

ಭಾರತವು ಹಳ್ಳಿಗಳ, ಅದರಲ್ಲೂ ಕೃಷಿ ಪ್ರಧಾನವಾದ ರಾಷ್ಟ್ರ. ಈ ಭಾರತದ ಹಳ್ಳಿಗಳು ಕೇವಲ ರೈತರನ್ನಲ್ಲದೆ ಅನೇಕ ಸೃಜನಶೀಲ ಪ್ರತಿಭೆಗಳನ್ನು ನೀಡಿದ್ದು ಭಾರತಕ್ಕೆ ಹೆಮ್ಮೆಯ ವಿಷಯ. ಇಂತಹ ಕೆಲವು ಉದಾಹರಣೆಗಳು ಬಂಟ್ವಾಳ ತಾಲೂಕು ,ವಿಟ್ಲ ಕಸಬಾ ಗ್ರಾಮದ ಬೊಳಂತಿಮೊಗರು ಊರಿನ ಕಾಯರ್ ಮಾರ್ ತಾರನಾಥ ಹಾಗೂ ಪುಷ್ಪವತಿ ಅವರ ಮಗ ಶಿವಪ್ರಸಾದ್ ಕೆ.ಟಿ ಮತ್ತು ಅವರ ಸೊಸೆ ಅರ್ಪಿತ ‌ ಆರ್. ಜಿ ಎಂಬುವವರು ಉನ್ನತ ಅಧ್ಯಯನಕ್ಕಾಗಿ ಬೆಂಗಳೂರಿಗೆ ಹೋಗಿ ತಮ್ಮ ಕಲಾ ಅಭ್ಯಾಸವನ್ನು(ಮಾಸ್ಟರ್ಸ್ ಡಿಗ್ರಿ) ಪೂರೈಸಿಕೊಂಡಿದ್ದಾರೆ.

ದೃಶ್ಯಕಲಾ ಮತ್ತು ಪ್ರದರ್ಶನ ಕಲೆಗಳಂತ ಪ್ರಕಾರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದವರು ತಮ್ಮ ಬದುಕನ್ನು ಕಟ್ಟಿಕೊಂಡವರು ಇಂದು ಜಗತ್ತಿನಲ್ಲಿಯೇ ಒಂದು ಅದ್ಭುತ ಇತಿಹಾಸವನ್ನು ರಚಿಸಿ ಬದಲಾವಣೆಯನ್ನುಂಟು ಮಾಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೊರೋನಾ ಹಾವಳಿಗೆ ತತ್ತರಿಸಿಹೋದ ಕಲಾಪ್ರಪಂಚ ಮತ್ತು ಕಲಾಸಕ್ತರಿಗೆ ಒಂದು ಪ್ರಕಾರದ ಮುದ್ರಣಕಲೆ (ವುಡ್ ಕಟ್ ಪ್ರಿಂಟ್ ) ಪ್ರದರ್ಶನವನ್ನು ಏರ್ಪಡಿಸಿದ್ದು, ಭವ್ಯವಾದ ಪ್ರಾರಂಭವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನೆರವೇರಿಸಿದ್ದಾರೆ.

ಅರ್ಪಿತ ‌ ಆರ್. ಜಿ (ಕ್ಯೂರೇಟರ್). ಈ ಬೃಹತ್ತಾಕಾರದ ಕಲಾ ಪ್ರದರ್ಶನದಲ್ಲಿ ಕರ್ನಾಟಕದ 75 ಕಲಾವಿದರು ಭಾಗವಹಿಸಿದ್ದಾರೆ .ಇದರಲ್ಲಿ 25 ವರ್ಷದಿಂದ 60 ವರ್ಷದ ವಯಸ್ಸಿನ ಹಿರಿಯ ಕಲಾವಿದರು ಭಾಗವಹಿಸಿದ್ದಾರೆ. ಜೊತೆಗೆ ಇತರ ಕಲಾಪ್ರಕಾರಗಳಲ್ಲಿ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡವರು ಪ್ರಥಮಬಾರಿಗೆ ಮುದ್ರಣ ಕಲೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.

ಅಲ್ಲದೆ ಈ ಪ್ರದರ್ಶನದಲ್ಲಿ 4 ಅಡಿ ಅಗಲ ಹಾಗೂ 8 ಅಡಿ ಎತ್ತರದ ಕಲಾಕೃತಿಗಳನ್ನು ಪ್ರದರ್ಶನ ಪಡಿಸಿರುವುದು ಭಾರತದಲ್ಲಿ ಪ್ರಥಮವಾಗಿದೆ. ಪ್ರದರ್ಶನವು ಇಡೀ ದೇಶದ ಕಲಾ ವಲಯಕ್ಕೆ ರೋಮಾಂಚನವನ್ನು ಉಂಟು ಮಾಡಿದ್ದು , ಈ ಪ್ರದರ್ಶನವು ಇದೆ ತಿಂಗಳ 22. 9.2021 ರಿಂದ ಪ್ರಾರಂಭವಾಗಿದ್ದು 03.10.2021 ವರೆಗೂ ನಡೆಯಲಿದೆ ಹಾಗೂ ಬೆಂಗಳೂರಿನ ಕಲಾ ಜಗತ್ತಿಗೆ ಹಬ್ಬದ ವಾತಾವರಣವನ್ನು ಉಂಟು ಮಾಡಿದೆ.

- Advertisement -

Related news

error: Content is protected !!