ಬೆಳ್ತಂಗಡಿ: ಬಾಲಕಿಯ ಮೇಲೆ ಅತ್ಯಾಚಾರ ಆರೋಪಿಸಿ ಇಬ್ಬರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾಯಣ ನಾಯ್ಕ ಎಂಬಾತನು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಬಾಲಕಿಯ ತಂದೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾರಾಯಣ ನಾಯ್ಕ ಎಂಬಾತನು ಜು.8 ರಂದು ಗೆಣಸು ನೀಡುವುದಾಗಿ ಹೇಳಿ 6 ವರ್ಷ ಪ್ರಾಯದ ಬಾಲಕಿಯನ್ನು ಮನೆಗೆ ಕರೆಸಿಕೊಂಡು, ಮನೆಗೆ ಬಂದ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ.
ಸಂತ್ರಸ್ತ ಬಾಲಕಿಯು ಮನೆಯಲ್ಲಿ ಈ ವಿಚಾರವನ್ನು ತಿಳಿಸಿದ್ದು, ಮಗುವಿನ ಮುಂದಿನ ಭವಿಷ್ಯ ಮತ್ತು ಮರ್ಯಾದೆ ಬಗ್ಗೆ ಆಲೋಚಿಸಿ ಹೆತ್ತವರು ಆಸ್ಪತ್ರೆಗೂ ಹೋಗದೇ, ದೂರೂ ನೀಡದೇ ಇದ್ದು, ಬಳಿಕ ನಿನ್ನೆಯೂ ಕೂಡಾ ಮಗುವನ್ನು ಕರೆದಿರುವುದರಿಂದ ಬಾಲಕಿಯ ತಂದೆ ಠಾಣೆಗೆ ಬಂದು ದೂರು ನೀಡಿದ್ದಾರೆ.
ನೊಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಾರಾಯಣ ನಾಯ್ಕನ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಅಕ್ರ:48/2022 ಕಲಂ:376AB ಐಪಿಸಿ & ಕಲಂ:5,6 ಫೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.