Friday, March 29, 2024
spot_imgspot_img
spot_imgspot_img

ಬೆಳ್ತಂಗಡಿ: ಕಲರ್ಸ್ ಕನ್ನಡ ಚಾನೆಲ್ ನ “ಡ್ಯಾನ್ಸಿಂಗ್ ಚಾಂಪ್ಯನ್ ರಿಯಾಲಿಟಿ ಶೋ” ಉಜಿರೆಯ ಮಾಸ್ಟರ್ ತೌಶೀರ್ ಆಯ್ಕೆ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ಬೆಳ್ತಂಗಡಿ: ಕಲರ್ಸ್ ಕನ್ನಡ ಚಾನೆಲ್ ನ “ಡ್ಯಾನ್ಸಿಂಗ್ ಚಾಂಪ್ಯನ್ ರಿಯಾಲಿಟಿ ಶೋ “ಗೆ ಉಜಿರೆಯ ಸೆಲೆಬ್ರೆಟಿ ಡ್ಯಾನ್ಸ್ ಮಾಸ್ಟರ್ ತೌಶೀರ್ ಆಯ್ಕೆಯಾಗಿದ್ದಾರೆ.

vtv vitla

ಮಾಸ್ಟರ್ ತೌಶೀರ್ ಅವರು ಉಜಿರೆ ಟಿ.ಬಿ ಕ್ರಾಸ್ ಬಳಿಯ ಸಿ.ಹೆಚ್ ಮಂಝಿಲ್ ನಿವಾಸಿ ಯು.ಕೆ ಹನೀಫ್ ಮತ್ತು ತಾಹಿರಾ ದಂಪತಿಯ ಪುತ್ರನಾಗಿದ್ದು, ಉಜಿರೆ ಎಸ್‌ಡಿಎಂ ಸಿಬಿಎಸ್‌ಇ ಸಂಸ್ಥೆಯ ಹಳೆವಿದ್ಯಾರ್ಥಿಯಾಗಿರುವ ಅವರು ಪ್ರಸ್ತುತ ಗುರುವಾಯನಕೆರೆ ಎಕ್ಸೆಲ್ ಪ. ಪೂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ಈ ಹಿಂದೆ ಮಾಸ್ಟರ್ ತೌಶಿರ್ ಅವರು ಸ್ಟಾರ್ ಸುವರ್ಣ ಚಾನೆಲ್‌ನ ಪುಟಾಣಿ ಪಂಟ್ರು ಸೀಝನ್-2 ರಲ್ಲಿ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದರು. ಬಳಿಕ ಡ್ಯಾನ್ಸ್- ಡ್ಯಾನ್ಸ್ ರಿಯಾಲಿಟಿ ಶೋ ಇದರ ವಿನ್ನರ್ ಆಗಿ ರಾಜ್ಯದ ಪ್ರಮುಖ ಸೆಲೆಬ್ರೆಟಿ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ.

vtv vitla

ಮಾಸ್ಟರ್ ತೌಶಿರ್ ಅವರು 2016 ರಲ್ಲಿ ಸುವರ್ಣ ಪರಿವಾರ್ ಅವಾರ್ಡ್ ಕೂಡಾ ಪಡೆಡಿದ್ದಾರೆ. ಮಾತ್ರವಲ್ಲದೆ ಈ ಹಿಂದೆ ಎರಡು ಚಲನಚಿತ್ರಗಳಾದ ಅಲ್ಲಮ ಮತ್ತು ರಾಜಾರಾಣಿ ರೋರಲ್ ರಾಕೆಟ್ ದಲ್ಲೂ ಬಾಲನಟನಾಗಿ ಪ್ರಬುದ್ಧತೆಯ ಪ್ರದರ್ಶನ ತೋರಿದ್ದಾರೆ.

ಇದೀಗ ಕಲರ್ಸ್ ಕನ್ನಡ ಚಾನೆಲ್ ವತಿಯಿಂದ ರಾಜ್ಯಾದ್ಯಂತ ನಾಲ್ಕು ಹಂತಗಳಲ್ಲಿ ಹಮ್ಮಿಕೊಂಡಿದ್ದ ಡ್ಯಾನ್ಸಿಂಗ್ ಸ್ಟಾರ್‌ಗಳ ಆಯ್ಕೆಯ ಆಡಿಷನ್‌ನಲ್ಲಿ ಮಾಸ್ಟರ್ ತೌಶೀರ್ ಅವರು ತೀರ್ಪುಗಾರರ ಮುಂದೆ ಅತ್ಯಪೂರ್ವ ಪ್ರದರ್ಶನ ನೀಡಿ ಮೆಗಾ ಆಡಿಷನ್‌ನಲ್ಲಿ ಆಯ್ಕೆಯಾಗಿದ್ದು, ಈ ಸ್ಪರ್ಧೆಯಲ್ಲಿ ಅವರ ಪ್ರಮುಖ ಜೊತೆಗಾರ್ತಿಯಾಗಿ ಖ್ಯಾತ ಚಲನಚಿತ್ರ ನಟಿ, ರಾಜಾರಾಣಿ ಶೋನ ರನ್ನರ್ ಆಪ್ ಪಡೆದಿರುವ ಇಶಿತಾ ವರ್ಷ ಅವರು ಇರಲಿದ್ದಾರೆ.

vtv vitla
vtv vitla
- Advertisement -

Related news

error: Content is protected !!