Wednesday, May 15, 2024
spot_imgspot_img
spot_imgspot_img

ಬೆಳ್ತಂಗಡಿ: ಗುಡ್ಡದಲ್ಲಿ ಜುಗಾರಿಯಾಡುತ್ತಿದ್ದಾಗ ಪೊಲೀಸ್ ರೈಡ್‌..! ನಾಲ್ವರು ಅರೆಸ್ಟ್‌ – ನಾಲ್ವರು ಎಸ್ಕೇಪ್

- Advertisement -G L Acharya panikkar
- Advertisement -

ಬೆಳ್ತಂಗಡಿ: ತೋಟತ್ತಾಡಿ ಗ್ರಾಮದ ಮುಂಡಾಯಿಲು ಎಂಬಲ್ಲಿನ ಸರಕಾರಿ ಗುಡ್ಡದಲ್ಲಿ ಜುಗಾರಿ ಆಟವಾಡುತ್ತಿದ್ದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಇನ್ನುಳಿದ ನಾಲ್ವರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಬಂಧಿತ ಆರೋಪಿಗಳನ್ನು ಚಾರ್ಮಾಡಿ ಗ್ರಾಮದ ಅರಕಲ್ ಮನೆ ನಿವಾಸಿ ರಹೀಂ (44), ಮುಂಡಾಜೆ ಗ್ರಾಮದ ದೇವಗುಡಿ ಮನೆಯ ಫಯಾಜ್ ಪಾಷಾ (33), ಕಡಿರುದ್ಯಾವರ ಗ್ರಾಮದ, ಕಾನರ್ಪ ನಿವಾಸಿ ರಾಜೇಶ್, (46), ತೋಟತ್ತಾಡಿ ಗ್ರಾಮದ ಮುಂಡಾಯಿಲ್ ಮನೆಯ ಅನೀಲ್ (45) ಎನ್ನಲಾಗಿದೆ. ಸಿದ್ದಿಕ್ ಯಾನ ಅರೆಕಲ್ ಸಿದ್ದಿಕ್, ಕೃಷ್ಣ ಯಾನೆ ಕಿಟ್ಟ ಗಾಂಧಿನಗರ, ಸಂತೋಷ್ ಗಾಂಧಿನಗರ, ಸುಧಾಕರ ಕೊಯಿಕುರಿ ಪೊಲೀಸರ ದಾಳಿ ವೇಳೆ ತಪ್ಪಿಸಿಕೊಂಡಿದ್ದಾರೆ.

ತೋಟತ್ತಾಡಿ ಗ್ರಾಮದ ಮುಂಡಾಯಿಲು ಎಂಬಲ್ಲಿ ಸರಕಾರಿ ಗುಡ್ಡದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ವಯ ಮಾ.12ರಂದು ಬೆಳಗ್ಗಿನ ಜಾವ 3.30 ಗಂಟೆಗೆ ಜುಗಾರಿ ಅಡ್ಡೆಗೆ ದಾಳಿ ನಡೆಸಿದಾಗ ಆಟ ಆಡುತ್ತಿದ್ದವರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು ಓಡಿ ಹೋಗುತ್ತಿದ್ದವರನ್ನು ಪೊಲೀಸರು ಬೆನ್ನಟ್ಟಿ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳದಲ್ಲಿದ್ದ ಪ್ಲಾಸ್ಟಿಕ್‌ ಚಾಪೆ, ಮೇಣದ ಬತ್ತಿ, ಲೈಟರ್, ವಿವಿಧ ಜಾತಿಯ ಇಸ್ಪೀಟ್ ಎಲೆಗಳು, ಒಟ್ಟು ರೂ 7,070 ನಗದು, ಒಂದು ಟಚ್ ಸ್ಟೀನ್ ಮೊಬೈಲ್, ನಾಲ್ಕು ಚಿಕ್ಕ ಮೊಬೈಲ್‌ ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೋತ್ತುಗಳ ಒಟ್ಟು ಮೌಲ್ಯ ರೂ. 11,870 ಎಂದು ಅಂದಾಜಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!