Saturday, June 28, 2025
spot_imgspot_img
spot_imgspot_img

ಬೆಳ್ತಂಗಡಿ: ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗ ಪತ್ತೆ; ಅಷ್ಟಮಂಗಲ ಪ್ರಶ್ನೆಯಲ್ಲಿ ಶಿವನ ಸಾನಿಧ್ಯದ ಕುರುಹು

- Advertisement -
- Advertisement -
vtv vitla

ಬೆಳ್ತಂಗಡಿ: ಉಜಿರೆ ಸಮೀಪದ ಪೆರ್ಲದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕೆಲಸ ಕಾರ್ಯಗಳು ನಡೆಯುತ್ತಿದ್ದ ಸಂದರ್ಭ ಪುರಾತನ ಶಿವಲಿಂಗವೊಂದು ಪತ್ತೆಯಾದ ಘಟನೆ ನಡೆದಿದೆ.

ಗ್ರಾಮಸ್ಥರಿಂದ ಪುರಾತನ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ನವೀಕರಣಕ್ಕಾಗಿ ದೈವಜ್ಞರಿಂದ ಅಷ್ಟಮಂಗಲ ಪ್ರಶ್ನೆ ಇಟ್ಟ ಸಂದರ್ಭದಲ್ಲಿ ದೇವಸ್ಥಾನದ ಕುರುಹು ಇದ್ದ ಪಕ್ಕದ ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗವೊಂದು ಡಿ.16 ರಂದು ಪತ್ತೆಯಾಗಿದೆ.

ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಇಲ್ಲಿ ಕಳೆದ ಡಿ.8 ಮತ್ತು 9 ಹಾಗೂ 15 ಮತ್ತು 16ರಂದು ದೈವಜ್ಞರಾದ ನೆಲ್ಯಾಡಿ ಶ್ರೀಧರ ಗೋರೆಯವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಯುತ್ತಿತ್ತು. ಈ ವೇಳೆ ಅವರು ತಿಳಿಸಿದಂತೆ ಈ ಪರಿಸರದಲ್ಲಿ ಶಿವನ ಸಾನಿಧ್ಯವಿದೆಯೆಂದು ಗೋಚರಿಸುತ್ತದೆ ಎಂದು ತಿಳಿಸಿದ್ದರು ಅಂತೆಯೇ ಅವರು ತಿಳಿಸಿದ ಜಾಗದಲ್ಲಿ ಅಗೆದಾಗ ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದ್ದು, ಈ ಮೂಲಕ ಶಿವನ ಸಾನಿಧ್ಯದ ಕುರುಹು ಪತ್ತೆಯಾಗಿದೆ.

ಅಷ್ಟಮಂಗಲದ ಬಳಿಕ ಪ್ರಶ್ನಾಚಿಂತನೆಯಲ್ಲಿ ಬಂದಂತೆಯೇ ಮುಂದಿನ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಈ ಸಂದರ್ಭದಲ್ಲಿಯೇ ಶಿವಲಿಂಗ ಪತ್ತೆಯಾಗಿರುವುದು ಕ್ಷೇತ್ರದ ಸಾನಿಧ್ಯಕ್ಕೆ ಶಕ್ತಿ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

- Advertisement -

Related news

error: Content is protected !!