
ಬೆಳ್ತಂಗಡಿ: ನಿಯಂತ್ರಣ ಕಳೆದುಕೊಂಡ ಬೈಕ್ ಮನೆಯ ಗೇಟಿನ ಬಳಿ ಇದ್ದ ಕಲ್ಲಿನ ಕಂಬಕ್ಕೆ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಘಟನೆ ಉಜಿರೆಯ ಮುಂಡಾಜೆ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದ ತಿರುವಿನ ರಸ್ತೆಯಲ್ಲಿ ನಡೆದಿದೆ. ಬೈಕ್ ಸ್ಕಿಡ್ ಆಗಿ ಸವಾರ ಮೃತಪಟ್ಟಿರುವ ಘಟನೆ ನ.23 ರಂದು ರಾತ್ರಿ ವೇಳೆ ನಡೆದಿದೆ. ನೆರಿಯ ಗ್ರಾಮದ ಪಾದೆಗುಡ್ಡೆ ನಿವಾಸಿ ನೋಣಯ್ಯ ಗೌಡರ ಪುತ್ರ ಪ್ರದೀಪ್ (22) ದುರ್ದೈವಿ.
ಪ್ರದೀಪ್ ಸಂಬಂಧಿಗಳ ಮನೆಯಲ್ಲಿ ಇರುವ ಶುಭ ಕಾರ್ಯದ ನಿಮಿತ್ತ ವಸ್ತುವೊಂದನ್ನು ನೀಡಲು ಹೋಗುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತವಾದ ರಸ್ತೆಯು ಅಪಾಯಕಾರಿ ವಲಯವಾಗಿದ್ದು , ಈ ಹಿಂದೆ ಕೂಡ ಇಲ್ಲಿ ಹಲವಾರು ಭಾರಿ ಅಪಘಾತ ಮತ್ತು ಪ್ರಾಣಹಾನಿ ಸಂಭವಿಸಿದೆ.

ಪ್ರದೀಪ್ ಅವರು ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಎಡ ಭಾಗದಲ್ಲಿರುವ ಮನೆಯ ಗೇಟಿನ ಬಳಿ ಇದ್ದ ಕಲ್ಲಿನ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಲ್ಲಿದ್ದ ಸ್ಥಳೀಯರು ತಕ್ಷಣ ಪ್ರದೀಪ್ ಅವರನ್ನು ಉಜಿರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಗಳೂರಿಗೆ ಸಾಗಿಸುವ ಮಧ್ಯ ದಾರಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
- ನ.18, 19ರಂದು ರಾಜ್ಯದಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ
- ಕೆಪಿಎಸ್ಸಿ ನೇಮಕಾತಿ ಹಗರಣ: 1.22 ಕೋಟಿ ರೂ. ಆಸ್ತಿ ಜಪ್ತಿ ಮಾಡಿದ ಈ.ಡಿ
- ವೀರಮಂಗಲ ಶಾಲೆಯ ಮುಂಭಾಗದಲ್ಲಿ ಬಾಲಕನಿಗೆ ಸ್ಕೂಟರ್ ಡಿಕ್ಕಿ- ಬಾಲಕನಿಗೆ ಗಾಯ
- ಸುಮಾರು 20 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
- ತಮಿಳುನಾಡಿನ ಕಡಲೂರಿನಲ್ಲಿ ಹಕ್ಕಿ ಜ್ವರ – 5 ಫಾರ್ಮ್ಗಳಲ್ಲಿ 35,647 ಕೋಳಿಗಳು ಸಾವು










