Wednesday, May 1, 2024
spot_imgspot_img
spot_imgspot_img

ಬೆಳ್ತಂಗಡಿ : ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದ ಉರಗ ತಜ್ಞ ಸ್ನೇಕ್ ಅನಿಲ್

- Advertisement -G L Acharya panikkar
- Advertisement -

ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿಯಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದ್ದು ಹಾವನ್ನು ಕಕ್ಕಿಂಜೆಯ ಉರಗ ತಜ್ಞ ಸ್ನೇಕ್ ಅನಿಲ್ ಅವರು ಹಾವನ್ನು ರಕ್ಷಿಸುವ ಕಾರ್ಯಮಾಡಿದ್ದಾರೆ.

ಇಲ್ಲಿನ ನಿವಾಸಿ ಬಾಬುಗೌಡ ಎಂಬವರ ಮನೆಯ ಸಮೀಪ ಹಾವು ಕಾಣಿಸಿಕೊಂಡಿದ್ದು ಕೂಡಲೇ ಮನೆಯವರು ಈ ಬಗ್ಗೆ ಅನಿಲ್ ಅವರಿಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಅವರು ಸ್ಥಳಕ್ಕೆ ಆಗಮಿಸಿ ಅತ್ಯಂತ ಸಾಹಸಿಕವಾಗಿ ಹಾವನ್ನು ರಕ್ಷಿಸುವ ಕಾರ್ಯವನ್ನು ಮಾಡಿದ್ದಾರೆ.

ರಕ್ಷಿಸಿದ ಹಾವನ್ನು ಅವರು ಅರಣ್ಯಕ್ಕೆ ಬಿಟ್ಟಿದ್ದಾರೆ. ಈಗಾಗಲೇ ಅವರು ನೂರಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ.

- Advertisement -

Related news

error: Content is protected !!