Friday, September 18, 2026
spot_imgspot_img
spot_imgspot_img

ಬೆಳ್ತಂಗಡಿ: “ಮಾರಿಗುಡಿಸ್” ಪೇಜಿನಲ್ಲಿ ಅವಹೇಳನಕಾರಿ ಪೋಸ್ಟ್; ಒರ್ವ ಸೈಬರ್ ಕ್ರೈಂ ಪೊಲೀಸರ ವಶಕ್ಕೆ

- Advertisement -
- Advertisement -

ಬೆಳ್ತಂಗಡಿ : ಸಾಮಾಜಿಕ ತಾಲತಾಣವಾದ ಇನ್ಟಾಗ್ರಾಮ್ ನಲ್ಲಿ “ಮಾರಿಗುಡಿಸ್” ಎಂಬ ಪೇಜ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಂದು ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವ ಬಗ್ಗೆ ಮಂಗಳೂರಿನ ಯುವಕನೊಬ್ಬ ಮಂಗಳೂರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ.

ಈ ಬಗ್ಗೆ ತನಿಖೆ ನಡೆಸಿದಾಗ ಸಿಮ್ ಕಾರ್ಡ್ ಹಾಗೂ ಮೊಬೈಲ್ ವಿಳಾಸ ಹೊಂದಿರುವ ವ್ಯಕ್ತಿ ದುಬೈನಲ್ಲಿ ಉದ್ಯೋಗದಲ್ಲಿರುವುದು ಕಂಡುಬಂದಿತ್ತು. ಇದರ ಬೆನ್ನು ಹತ್ತಿದಾಗ ಸಿಮ್ ಹಾಗೂ ಮೊಬೈಲ್ ಫೋನ್ ಇನ್ನೊಬ್ಬ ಸಂಬಂಧಿ ಯುವಕ ಉಪಯೋಗಿಸುತ್ತಿರುವುದು ಎಂದು ತನಿಖೆ ನಡೆಸುತ್ತಾ ಹೋದಾಗ ತಿಳಿದಿತ್ತು. ಅದರ ಜಾಡು ಹಿಡಿದುಹೋರಟಾಗ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ರೊಟ್ಟು ನಿವಾಸಿಯಾಗಿರುವ ಉಜಿರೆ ಬಸ್ ನಿಲ್ದಾಣದ ಬಳಿ ಇರುವ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಹಂಝ್ಮಾಲ್ (19) ಎಂದು ಗೊತ್ತಾಗಿದೆ.

ಬಳಿಕ ಖಚಿತ ಮಾಹಿತಿ ಮೇರೆಗೆ ಉಜಿರೆಯಿಂದ ಮಹಮ್ಮದ್ ಹಂಝ್ಮಾಲ್ ನನ್ನು ವಶಕ್ಕೆ ಪಡೆದುಕೊಂಡು ಮಂಗಳೂರು ಸೈಬರ್ ಕ್ರೈಂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದು ನಂತರ ಪೊಲೀಸರು ಬಂಧಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!