Thursday, May 16, 2024
spot_imgspot_img
spot_imgspot_img

ಬೆಳ್ತಂಗಡಿ: ವಿವಾಹ ಸಮಾರಂಭಕ್ಕೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು!

- Advertisement -G L Acharya panikkar
- Advertisement -
driving

ಅಳದಂಗಡಿ: ಮದುವೆ ಸಮಾರಂಭವೊಂದರಲ್ಲಿ ಅನುಮತಿ ಪಡೆದುಕೊಂಡಿರುವುದಕ್ಕಿಂದ ಹೆಚ್ಚಿನ ಜನರಿರುವುದನ್ನು ತಿಳಿದ ತಾಲೂಕು ತಹಶೀಲ್ದಾರ್ ತಂಡದವರು ಸ್ಥಳಕ್ಕೆ ದಾಳಿ ನಡೆಸಿ ದಂಡ ವಿಧಿಸಿದ ಘಟನೆ ಗುರುವಾರ ಬೆಳ್ತಂಗಡಿ ಸಮೀಪದ ಅಳದಂಗಡಿಯಲ್ಲಿ ನಡೆದಿದೆ.

ಮದುವೆ ಸಮಾರಂಭಕ್ಕೆ 50 ಜನರಿಗೆ ಮಾತ್ರ ಅನುಮತಿಯನ್ನು ಪಡೆದಿದ್ದು, ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಮೀರಿ 50ಕ್ಕಿಂತಲೂ ಹೆಚ್ಚು ಜನರು ನೆರೆದಿರುವುದನ್ನು ಗಮನಿಸಿದ ತಹಶೀಲ್ದಾರರ ತಂಡ ಸಬಾಭವನದ ಮಾಲಕರಿಗೆ 7500/- ಹಾಗೂ ಮದುವೆ ಮನೆಯವರಿಗೆ 5000/- ಸೇರಿದಂತೆ ಒಟ್ಟು 12500/- ದಂಡ ವಿಧಿಸಿ, ಮುನ್ನೆಚ್ಚರಿಕೆ ನೀಡಿದ್ದಾರೆ.

ತಹಶೀಲ್ದಾರ್ ಮಹೇಶ್ ಜೆ, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಪ್ರೊಬೆಷನರಿ ತಹಶಿಲ್ದಾರ್ ಮಹಮ್ಮದ್ ಅಲಿ ಅಕ್ರಂ ಷಾ, ಅಳದಂಗಡಿ ಗ್ರಾ.ಪಂ ಕಾರ್ಯದರ್ಶಿ ಶ್ರೀನಿವಾಸ್ , ಗ್ರಾಮ ಕರಣಿಕ ನಿತೇಶ್ ಜೈನ್, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

Related news

error: Content is protected !!