Friday, May 17, 2024
spot_imgspot_img
spot_imgspot_img

ಬೆಳ್ತಂಗಡಿ: ಹತ್ತಿಯ ಬೆಡ್ ಮಾರ್ಟ್‌‌ಗೆ ಆಕಸ್ಮಿಕ ಬೆಂಕಿ; ಪಕ್ಕದ ಅಂಗಡಿಗೂ ತಗುಲಿದ ಅಗ್ನಿ

- Advertisement -G L Acharya panikkar
- Advertisement -

ಉಜಿರೆ: ಉಜಿರೆಯ ಜನಾರ್ಧನ ದೇವಸ್ಥಾನದ ದ್ವಾರದ ಎದುರಿನ ಬಳಿ ಇರುವ ಹತ್ತಿಯ ಬೆಡ್ ಮಾರ್ಟ್‌‌ಗೆ ಶಾರ್ಟ್ ಸರ್ಕ್ಯೂಟ್‌‌ನಿಂದಾಗಿ ಬೆಂಕಿ ಬಿದ್ದಿರುವ ಘಟನೆ ನಡೆದಿದೆ.

ಅಲ್ಲೇ ಪಕ್ಕದಲ್ಲೇ ಇರುವ ಅಂಗಡಿಗಳಿಗೂ ಬೆಂಕಿ ತಗುಲಿದ್ದು, ಈ ಘಟನೆಯಿಂದ ಉಜಿರೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಪಟ್ಟಿದ್ದಾರೆ.

ತಕ್ಷಣ ಮಾಹಿತಿ ತಿಳಿದ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಉಜಿರೆಯಲ್ಲಿ ತಿಂಗಳ ಹಿಂದೆ ಅಂಗಡಿಯೊಂದಕ್ಕೆ ಬೆಂಕಿ ತಗುಲಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಪಿಡಿಓ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!