Friday, May 17, 2024
spot_imgspot_img
spot_imgspot_img

ಬೆಳ್ಳಾರೆ: ಅಸೌಖ್ಯದಿಂದ ನಿಧನರಾದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಗ್ರಾಮದ ರುದ್ರಭೂಮಿಯಲ್ಲಿ ಮಾಡದಂತೆ ಸ್ಥಳೀಯರಿಂದ ವಿರೋಧ!

- Advertisement -G L Acharya panikkar
- Advertisement -

ಬೆಳ್ಳಾರೆ: ತಡಗಜೆಯ ರಾಧಾಕೃಷ್ಣ ಕುಲಾಲ್ ಎಂಬವರು ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ಬೆಳ್ಳಾರೆ ಗೌರಿಯಲ್ಲಿರುವ ರುದ್ರ ಭೂಮಿಯಲ್ಲಿ ನೆರವೇರಿಸಲು ಪಂಚಾಯತ್‌ನವರು ನಿರ್ಧರಿಸಿ ಗೌರಿಹೊಳೆಗೆ ಬಂದು ಸಿದ್ಧತೆ ಮಾಡತೊಡಗಿದರು.

ಕೊರೋನ ರೋಗಿಯ ಮೃತದೇಹವನ್ನು ಇಲ್ಲಿಯ ಸ್ಮಶಾನಕ್ಕೆ ತರುವರೆಂಬ ಮಾಹಿತಿ ದೊರತ ಸ್ಥಳೀಯ ನಿವಾಸಿಗಳು ಸೇರಿ, ಕೊರೋನ ಪೇಶೆಂಟ್‌ನ ಮೃತದೇಹವನ್ನು ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದು. ಇಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ. ರುದ್ರಭೂಮಿ ಅಭಿವೃದ್ಧಿಯಾಗಿಲ್ಲ, ವ್ಯವಸ್ಥಿತವಾದ ಕಟ್ಟಡಗಳಿಲ್ಲ. ಆದುದರಿಂದ ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದೆಂದು ವಿರೋಧ ವ್ಯಕ್ತಪಡಿಸಿದರು.

ಬೆಳ್ಳಾರೆ ಪೊಲೀಸರು ಕೂಡ ಸ್ಥಳಕ್ಕೆ ಬಂದರು. ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಪಿ.ಡಿ.ಒ. ಭವ್ಯಶ್ರೀ , ಎ.ಎಸ್.ಐ. ಭಾಸ್ಕರ್, ಮತ್ತಿತರರು ಡಿ.ಸಿ. ಆದೇಶ ಮತ್ತು ಕೋರೋನ ಮಾರ್ಗಸೂಚಿಗಳ ಬಗ್ಗೆ ಹೇಳಿದರೂ ಸ್ಥಳೀಯರು ಒಪ್ಪದಿದ್ದುದರಿಂದ ಮೃತ ದೇಹವನ್ನು ಸುಳ್ಯ ಬಳಿಯ ಉಬರಡ್ಕ ಗ್ರಾಮಕ್ಕೊಳಪಡುವ ಕೊಡಿಯಾಲಬೈಲು ಹಿಂದು ರುದ್ರ ಭೂಮಿಗೆ ಕೊಂಡೊಯ್ಯಲು ನಿರ್ಧರಿಸಲಾಯಿತೆಂದು ತಿಳಿದು ಬಂದಿದೆ.

driving
- Advertisement -

Related news

error: Content is protected !!