Monday, May 13, 2024
spot_imgspot_img
spot_imgspot_img

ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳ ಏರಿಕೆ; ಬೂಸ್ಟರ್ ಡೋಸ್​​ಗಳ ಅಗತ್ಯವನ್ನು ನಿರ್ಣಯಿಸಲು ಅಧ್ಯಯನ ಪ್ರಾರಂಭಿಸಿದ ಕೇಂದ್ರ ಸರ್ಕಾರ

- Advertisement -G L Acharya panikkar
- Advertisement -

ದೆಹಲಿ: ಭಾರತದಲ್ಲಿ ಕೊವಿಡ್- 19 ವಿರುದ್ಧ ಬೂಸ್ಟರ್ ಡೋಸ್‌ಗಳ ಅಗತ್ಯವನ್ನು ನಿರ್ಣಯಿಸಲು ನರೇಂದ್ರ ಮೋದಿ ಸರ್ಕಾರವು ಅಧ್ಯಯನವನ್ನು ಪ್ರಾರಂಭಿಸಿದೆ. ಡಿಪಾರ್ಟ್‌ಮೆಂಟ್ ಆಫ್ ಬಯೋಟೆಕ್ನಾಲಜಿಯಪ್ರೀಮಿಯರ್ ಇನ್‌ಸ್ಟಿಟ್ಯೂಟ್ ಟ್ರಾನ್ಸ್‌ಲೇಶನಲ್ ಹೆಲ್ತ್ ಸೈನ್ಸ್ ಅಂಡ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ ನೇತೃತ್ವದ ಬಹು-ಕೇಂದ್ರದ ಅಧ್ಯಯನವು ಆರು ತಿಂಗಳ ಹಿಂದೆ ಎರಡನೇ ಡೋಸ್ ಕೊವಿಡ್ -19 ಲಸಿಕೆಯನ್ನು ಪಡೆದ 3,000 ಕ್ಕೂ ಹೆಚ್ಚು ಭಾಗವಹಿಸುವವರನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ.

vtv vitla
vtv vitla

ಡಿಬಿಟಿ ಪ್ರಾಯೋಜಿತ ಅಧ್ಯಯನವು ಭಾರತದಲ್ಲಿ ಬಳಸಲಾಗುವ ಕೊವಿಶೀಲ್ಡ್, ಕೊವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಈ ಮೂರು ಲಸಿಕೆಗಳನ್ನು ಒಳಗೊಂಡಿದೆ. ಕೊರೊನಾವೈರಸ್​​ನ ಹೊಸ ರೂಪಾಂತರವಾದ ಒಮಿಕ್ರಾನ್‌ನ ಆಗಮನವು ದೇಶದಲ್ಲಿ ಬೂಸ್ಟರ್ ಡೋಸ್‌ಗಳ ಕರೆಗಳನ್ನು ಹುಟ್ಟುಹಾಕಿದೆ. ಲಸಿಕೆ ಪರಿಣಾಮಕಾರಿತ್ವವನ್ನು ಪುನಃಸ್ಥಾಪಿಸುವುದು ಬೂಸ್ಟರ್ ಡೋಸ್‌ನ ಉದ್ದೇಶವಾಗಿದೆ. ಆದಾಗ್ಯೂ, ಇಲ್ಲಿಯವರೆಗೆ ಭಾರತದಲ್ಲಿ ಲಸಿಕೆಗಳು ನೀಡಿದ ರೋಗನಿರೋಧಕ ಶಕ್ತಿ ಕ್ಷೀಣಿಸಲು ಪ್ರಾರಂಭಿಸಿದೆಯೇ ಅಥವಾ ಬೂಸ್ಟರ್ ಡೋಸ್‌ಗಳ ತುರ್ತು ಅವಶ್ಯಕತೆ ಇದೆಯೇ ಎಂಬುದು ಸ್ಪಷ್ಟವಾಗಿಲ್ಲ.

“ಇದು ಒಂದು ಶೈಕ್ಷಣಿಕ ಅಧ್ಯಯನವಾಗಿದ್ದು, ನೈಜ-ಪ್ರಪಂಚದ ಸನ್ನಿವೇಶದಲ್ಲಿ ಪ್ರತಿರಕ್ಷೆಯ ಅವಧಿಯನ್ನು ಅರ್ಥಮಾಡಿಕೊಳ್ಳುವುದು ಕಲ್ಪನೆಯಾಗಿದೆ. ಕೋಶ ಸಂಬಂಧಿ ರೋಗನಿರೋಧಕ ಶಕ್ತಿಯನ್ನು ನಿರ್ಣಯಿಸಲು ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಅಧ್ಯಯನದ ಅಡಿಯಲ್ಲಿ ದಾಖಲಾದ ಸೈಟ್‌ಗಳ ಮುಖ್ಯಸ್ಥರಾಗಿರುವ ಹಿರಿಯ ಅಧಿಕಾರಿಯೊಬ್ಬರು ನ್ಯೂಸ್ 18ಗೆ ತಿಳಿಸಿದರು.

ನಾವು T ಮತ್ತು B ಜೀವಕೋಶದ ಪ್ರತಿಕ್ರಿಯೆ ಮತ್ತು ಪ್ರತಿಕಾಯಗಳನ್ನು ವಿಶ್ಲೇಷಿಸುತ್ತೇವೆ ಮತ್ತು ಎರಡನೇ ಡೋಸ್ ಸ್ವೀಕರಿಸಿದ ಆರು ತಿಂಗಳ ನಂತರ ರಕ್ಷಣೆಯ ಮಟ್ಟ ಏನು ಎಂಬುದನ್ನು ಗಮನಿಸುತ್ತೇವೆ. ಇದು ಭಾರತದಲ್ಲಿ ಬೂಸ್ಟರ್ ಡೋಸ್‌ಗಳ ಅಗತ್ಯತೆಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

vtv vitla

ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮೋದಿ ಸರ್ಕಾರವು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಅನ್ನು ನೇಮಕ ಮಾಡಿದ್ದು, ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಶೀಘ್ರದಲ್ಲೇ ಸಭೆ ಸೇರಲಿದೆ.

ಅಧ್ಯಯನವು ಹೇಗೆ ನಡೆಯುತ್ತದೆ?
40 ವರ್ಷಕ್ಕಿಂತ ಮೇಲ್ಪಟ್ಟ ಜನರು, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು, ವ್ಯಾಕ್ಸಿನೇಷನ್‌ಗೆ ಮುಂಚಿತವಾಗಿ ಕೊವಿಡ್-19 ಸೋಂಕಿಗೆ ಒಳಗಾದ ಜನರು ಮತ್ತು ಕೊಮೊರ್ಬಿಡ್ ಪರಿಸ್ಥಿತಿ ಹೊಂದಿರುವ ಜನರು ನಾಲ್ಕು ಸಮೂಹಗಳನ್ನು ಒಳಗೊಂಡಂತೆ ಅಧ್ಯಯನವನ್ನು ಸೆಟ್ ಮಾಡಲಾಗಿದೆ.

vtv vitla
vtv vitla

ಅಧ್ಯಯನದಲ್ಲಿ ತೊಡಗಿರುವ ಆಸ್ಪತ್ರೆ ಸೈಟ್‌ಗಳು ದೆಹಲಿ-ಎನ್‌ಸಿಆರ್, ಗುರುಗ್ರಾಮ್ ಮತ್ತು ಫರಿದಾಬಾದ್‌ನಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸುತ್ತಿವೆ. “ಅವರ ವೈದ್ಯಕೀಯ ಇತಿಹಾಸ, ವ್ಯಾಕ್ಸಿನೇಷನ್ ಸ್ಥಿತಿ ಮತ್ತು ಇತರ ಕ್ಲಿನಿಕಲ್ ಮಾಹಿತಿಯ ಮಾಹಿತಿಯನ್ನು ಸಂಗ್ರಹಿಸಲು ಸರಳವಾದ ಪ್ರಶ್ನಾವಳಿಯನ್ನು ರಚಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.

ಸೈಟ್‌ಗಳು ರಕ್ತದ ಮಾದರಿಗಳ ವರದಿಯನ್ನು ಭಾರತದಲ್ಲಿ ಬೂಸ್ಟರ್ ಡೋಸ್‌ಗಳ ಅಗತ್ಯತೆಯ ವಿಶ್ಲೇಷಣೆಯೊಂದಿಗೆ ಸಲ್ಲಿಸುತ್ತವೆ.“ನಾವು ಭಾರತದಲ್ಲಿ ಬೂಸ್ಟರ್‌ಗಳ ಅಗತ್ಯತೆಯ ಕುರಿತು ವರದಿಯನ್ನು ಸಲ್ಲಿಸುತ್ತೇವೆ. ಏತನ್ಮಧ್ಯೆ, ನಾವು DBT ಯ THSTI ಯೊಂದಿಗೆ ಸಾಪ್ತಾಹಿಕ ಚರ್ಚೆಗಳನ್ನು ನಡೆಸುತ್ತಿದ್ದೇವೆ ಮತ್ತು ರಕ್ತದ ಮಾದರಿಗಳನ್ನು ಕಳುಹಿಸುತ್ತಿದ್ದೇವೆ ಎಂದು ಮೂಲಗಳು ಹೇಳಿವೆ.

- Advertisement -

Related news

error: Content is protected !!