Friday, May 17, 2024
spot_imgspot_img
spot_imgspot_img

ಭಾರತದಲ್ಲಿ ಮಿಲಿಟರಿ ಸನ್ನದ್ಧತೆ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ; ಪ್ರಮುಖ ವಿಷಯಗಳ ಚರ್ಚೆ

- Advertisement -G L Acharya panikkar
- Advertisement -

ಭಾರತದ ಮಿಲಿಟರಿ ಸನ್ನದ್ಧತೆ, ಭದ್ರತಾ ಪರಿಶೀಲನೆ ಸಂಬಂಧ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಉಕ್ರೇನ್​ನಲ್ಲಿ ಯುದ್ಧ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿ ಯಾವ ರೀತಿಯ ಸನ್ನಿವೇಶ ಇದೆ ಎಂಬ ಬಗ್ಗೆಯೂ ಪ್ರಸ್ತುತ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ರಷ್ಯಾ-ಉಕ್ರೇನ್​ ಯುದ್ಧ ಶುರುವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹಲವಾರು ಉನ್ನತ ಸಭೆಗಳನ್ನು ನಡೆಸಿದ್ದಾರೆ. ಅಲ್ಲದೆ, ರಷ್ಯಾ ಮತ್ತು ಉಕ್ರೇನ್​ ಅಧ್ಯಕ್ಷರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ, ಅಲ್ಲಿನ ಸಂದರ್ಭವನ್ನೂ ಕೇಳಿದ್ದಾರೆ.

vtv vitla
vtv vitla

ರಷ್ಯಾ ಉಕ್ರೇನ್​ ಮೇಲೆ ಯುದ್ಧ ಸಾರಿದಾಗಿನಿಂದಲೂ ಉಕ್ರೇನ್​ನಲ್ಲಿದ್ದ ಭಾರತದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ಸರ್ಕಾರ ಅವಿರತವಾಗಿ ಶ್ರಮಿಸಿದೆ. ಆಪರೇಶನ್​ ಗಂಗಾ ಮೂಲಕ ಉಕ್ರೇನ್​ ನೆರೆ ರಾಷ್ಟ್ರಗಳಿಂದ ವಿಮಾನ ವ್ಯವಸ್ಥೆ ಮಾಡಿ ಅವರನ್ನೆಲ್ಲ ತಾಯ್ನಾಡಿಗೆ ಕರೆದುಕೊಂಡು ಬಂದಿದೆ. ಈ ಆಪರೇಶನ್ ಗಂಗಾ ಪರಿಣಾಮಕಾರಿಯಾಗಿ ನಡೆಯಲು ಪ್ರಧಾನಿ ಮೋದಿಯವರು ನಾಲ್ವರು ಸಚಿವರನ್ನು ಉಕ್ರೇನ್​ನ ನಾಲ್ಕು ಗಡಿ ರಾಷ್ಟ್ರಗಳಿಗೆ ಕಳಿಸಿದ್ದರು. ಒಟ್ಟಿಲ್ಲಿ ಯಶಸ್ವಿಯಾಗಿ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯ ನಡೆದಿದೆ.

ಹೀಗೆ ಯುದ್ಧಪೀಡಿತ ನೆಲದಿಂದ ಭಾರತೀಯರನ್ನು ರಕ್ಷಣೆ ಮಾಡುವ ಸಲುವಾಗಿ ಯೋಜನೆಗಳನ್ನು ರೂಪಿಸಲು ಪ್ರಧಾನಿ ಮೋದಿ ಹಲವಾರು ಸಭೆ ನಡೆಸಿದ್ದರು. ಪಂಚರಾಜ್ಯಗಳಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಿಕ್ಕ ಬೆನ್ನಲ್ಲ ಗುಜರಾತ್​ಗೆ ತೆರಳಿ ಅಲ್ಲಿ ರೋಡ್ ಶೋ ನಡೆಸಿದ್ದ ಪ್ರಧಾನಿ ಮೋದಿ ಎರಡು ದಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ತಮ್ಮ ತಾಯಿ ಹೀರಾಬೆನ್​ರನ್ನು ಭೇಟಿಯಾಗಿ ಅವರೊಂದಿಗೆ ಊಟ ಮಾಡಿ, ಆಶೀರ್ವಾದ ಪಡೆದು ದೆಹಲಿಗೆ ವಾಪಸ್ ಬಂದ ಬೆನ್ನಲ್ಲೇ ಈ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇಂದಿನ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್​, ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್​.ಜೈಶಂಕರ್​, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್​, ವಿದೇಶಾಂಗ ಇಲಾಖೆ ಸಚಿವ ಎಸ್​.ಜೈಶಂಕರ್​, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​ ಇತರರು ಇದ್ದರು.

vtv vitla
vtv vitla
- Advertisement -

Related news

error: Content is protected !!