Friday, March 29, 2024
spot_imgspot_img
spot_imgspot_img

ಭಾರತದ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಂಕಿಂಗ್ ವಂಚನೆ; ನೀರವ್ ಮೋದಿ, ಮಲ್ಯ ವಂಚನೆಯನ್ನು ಮೀರಿಸಿದ ಪ್ರಕರಣ.!?

- Advertisement -G L Acharya panikkar
- Advertisement -

ದೇಶದ ಅತಿದೊಡ್ಡ ಬ್ಯಾಂಕ್ ವಂಚನೆ ಇದೀಗ ಸಿಬಿಐ ಅಧಿಕಾರಿಗಳು ಬಯಲಿಗೆಳೆದಿದ್ದರೆ. ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನ ಮಾಜಿ‌ ಎಂಡಿ ಕಪಿಲ್ ವರ್ಧನ್ , ಡೈರೆಕ್ಟರ್ ‌ದೀರಜ್ ಸೇರಿ ಹಲವರ ಮೇಲೆ ಬರೊಬ್ಬರಿ 34,615 ಕೋಟಿ ವಿವಿಧ ಬ್ಯಾಂಕ್ ಗಳಿಗೆ ವಂಚನೆ ಕೇಸ್ ದಾಖಲಿಸಿದೆ.

ಗೃಹ ಸಾಲ ನೀಡುವ ಫೈನಾನ್ಸ್ ಕಂಪನಿ DHFL ಬರೋಬ್ಬರಿ 34,615 ಕೋಟಿ ರೂಪಾಯಿಗಳನ್ನು ವಿವಿಧ ಬ್ಯಾಂಕುಗಳಿಗೆ ವಂಚಿಸಿದೆ ಎಂದು ಹೇಳಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕುಗಳಿಂದ 2010-18 ರ ಅವಧಿಯಲ್ಲಿ DHFL ಒಟ್ಟು 42,871 ಕೋಟಿ ರೂಪಾಯಿಗಳ ಸಾಲ ಪಡೆದಿದ್ದು, ಆದರೆ ಈ ಪೈಕಿ ಬಹುತೇಕ ಹಣವನ್ನು ನಕಲಿ ದಾಖಲೆ ಸೃಷ್ಟಿಸುವ ಮೂಲಕ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂಬ ಸಂಗತಿ ತನಿಖೆ ವೇಳೆ ಕಂಡುಬಂದಿದೆ.

34,615 ಕೋಟಿ ರೂಪಾಯಿಗಳನ್ನು ಬ್ಯಾಂಕುಗಳಿಗೆ ಮರುಪಾವತಿಸದ ವಂಚಿಸಿರುವುದು ಪತ್ತೆಯಾಗಿದೆ. ಕಂಪನಿಯ ನಿರ್ದೇಶಕರು ವೈಯಕ್ತಿಕ ಲಾಭಕ್ಕೆ ಸಾಲದ ಹಣವನ್ನು ಬಳಸಿಕೊಂಡಿದ್ದು, ಈ ಹಣದಲ್ಲಿ ಭೂಮಿ ಮತ್ತು ಇತರೆ ಆಸ್ತಿ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಆ ನಂತರ ಸಾಲವನ್ನು ಅನುತ್ಪಾದಕ ಆಸ್ತಿ ಎಂದು ಬ್ಯಾಂಕುಗಳಿಗೆ ತೋರಿಸುವ ಮೂಲಕ ವಂಚನೆ ನಡೆಸಲಾಗಿದೆ.

ಮಾಜಿ‌ ಎಂಡಿ ಕಪಿಲ್ ವರ್ಧನ್

ಹಗರಣದ ಬಗ್ಗೆ ಜೂ.20ರಂದು ಪ್ರಕರಣದ ದಾಖಲಿಸಿಕೊಂಡಿದ್ದ ಸಿಬಿಐ, ಬುಧವಾರ ಮುಂಬೈನ 12 ಸ್ಥಳಗಳ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ದಾಖಲೆ ಪತ್ರ ವಶಪಡಿಸಿಕೊಂಡಿದೆ. ಇದು ಸಿಬಿಐ ಇದುವರೆಗೆ ದೇಶದಲ್ಲಿ ಬ್ಯಾಂಕಿಂಗ್‌ ವಂಚನೆ ಪ್ರಕರಣದಲ್ಲಿ ದಾಖಲಿಸಿಕೊಂಡ ಬೃಹತ್‌ ಮೊತ್ತದ ಪ್ರಕರಣವಾಗಿದೆ. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ನೀಡಿದ ದೂರಿನ ಆಧಾರದಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

- Advertisement -

Related news

error: Content is protected !!