Sunday, May 19, 2024
spot_imgspot_img
spot_imgspot_img

ಭಾರತೀಯ ರಕ್ಷಣಾ ಪಡೆ ಸೇರಿದ ಎಂಆರ್‌-20 ಡ್ರೋನ್‌; ಚೀನಾ ಗಡಿಯಲ್ಲಿ ನಡುಕ

- Advertisement -G L Acharya panikkar
- Advertisement -

ಲಡಾಖ್‌ನಲ್ಲಿ ಚೀನಾ ಗಡಿ ಕಾಯುವುದು ಸುಲಭದ ಕೆಲಸವಲ್ಲ. ಪರ್ವತ ಶಿಖರಗಳ ಮೇಲೆ, ದುರ್ಗಮ ಪ್ರದೇಶದಲ್ಲಿ ನಿಂತು ವೈರಿಗಳ ಮೇಲೆ ಕಣ್ಗಾವಲಿಡಬೇಕು. ಅದರಲ್ಲಿಯೂ ಪ್ರತಿಕೂಲ ವಾತಾವರಣದ ಪರಿಸ್ಥಿತಿಯಿಂದಾಗಿ ಅದೆಷ್ಟೋ ವೀರ ಸೈನಿಕರನ್ನು ನಾವು ಕಳೆದುಕೊಂಡಿದ್ದೇವೆ. ಆದ್ರೆ, ಇದೀಗ ಸೈನಿಕರ ನೆರವಿಗಾಗಿಯೇ ಬ್ರಹ್ಮಾಸ್ತ್ರವೊಂದು ಭಾರತೀಯ ರಕ್ಷಣಾ ಇಲಾಖೆಯ ಕೈಸೇರಿದೆ. ಆ ಬ್ರಹ್ಮಾಸ್ತ್ರವೇ ಎಂಆರ್‌-20 ಡ್ರೋನ್‌.

ಭಾರತ ಬಲಿಷ್ಠವಾಗುತ್ತಿದೆ. ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಅತ್ಯಾಧುನಿಕ ಫೈಟರ್‌ ಜೆಟ್‌ಗಳು, ಅಣ್ವಸ್ತ್ರ ಸಿಡಿತಲೆ ಹೊತ್ತು ಸಾಗಬಲ್ಲ ರಾಕೆಟ್‌ಗಳು, ಅತ್ಯಾಧುನಿಕ ಮಷಿನ್‌ ಗನ್‌ಗಳು, ಜಲಾಂತರ್ಗಾಮಿಗಳು ಜೊತೆಗೆ ವೈರಿಗಳ ಯುದ್ಧ ವಿಮಾನಗಳನ್ನು, ರಾಕೆಟ್‌ಗಳನ್ನು ಹೊಡೆದುರುಳಿಸ ಬಲ್ಲ ಪ್ರಬಲ ಅಸ್ತ್ರಗಳು ಈಗ ಭಾರತದ ಬತ್ತಳಿಕೆಯಲ್ಲಿವೆ. ಅದೇ ರೀತಿ ಭಾರತ, ಚೀನಾ ಗಡಿಯಲ್ಲಿರೋ ಸೈನಿಕರ ಕೈಗೆ ಮತ್ತೊಂದು ಬ್ರಹ್ಮಾಸ್ತ್ರ ಸಿಕ್ಕಿದೆ. ಅದುವೇ ಎಂಆರ್‌-20 ಡ್ರೋನ್‌.

ಭಾರತ ಮತ್ತು ಚೀನಾ ನಡುವಿನ ಲಡಾಖ್‌ ಗಡಿ ಪ್ರದೇಶ. ಭಾರತದಲ್ಲಿಯೇ ಅತಿ ಎತ್ತರದ ಪ್ರಸ್ಥಭೂಮಿ ಇದಾಗಿದೆ. ಇಲ್ಲಿಯ ಪರ್ವತ ಶ್ರೇಣಿಗಳು ಸಮುದ್ರ ಮಟ್ಟದಿಂದ 9800 ಅಡಿಗಿಂತ ಎಚ್ಚಿನ ಎತ್ತರದಲ್ಲಿವೆ. ಇದು ಹಿಮಾಲಯದಿಂದ ಕುನ್ಲುನ್‌ವರೆಗೆ ವ್ಯಾಪಿಸಿದೆ. ಎಲ್ಲಿ ನೋಡಿದ್ರೂ ಬೋಳು ಶಿಖರಗಳೇ ಕಾಣಿಸುತ್ತವೆ. ಇದೇ ಶಿಖರಗಳ ಮೇಲೆ ನಿಂತು ಭಾರತೀಯ ಸೈನಿಕರು ಗಡಿಕಾಯಬೇಕು. ಹೆಗಲ ಮೇಲೆ ಗನ್‌ ಇಟ್ಟುಕೊಂಡು ವೈರಿಗಳು ಗಡಿಯೊಳಗೆ ನುಗ್ಗದಂತೆ ನೋಡಿಕೊಳ್ಳಬೇಕು. ಇದೇನು ಸಾಮಾನ್ಯ ಕೆಲಸವಲ್ಲ. ಇದಕ್ಕೆ ಅನೇಕ ಸಮಸ್ಯೆಗಳು ಇದ್ವು.

ಭಾರತೀಯ ರಕ್ಷಣಾ ಪಡೆ ಸೇರಿದ ಎಂಆರ್‌-20 ಡ್ರೋನ್‌
ಲಡಾಖ್‌ನಲ್ಲಿ ಮೊದಲ ಬಾರಿಗೆ ನಡೆದ ಪ್ರಯೋಗ ಯಶಸ್ವಿ

ಈ ಎಂಆರ್‌-20 ಡ್ರೋನ್‌ಗಳು ಸಾಮಾನ್ಯ ಡ್ರೋನ್‌ಗಳಲ್ಲ. ಲಡಾಖ್‌ ಗಡಿಯಲ್ಲಿರೋ ಭಾರತೀಯ ಸೈನಿಕರಿಗೆ ಹೇಳಿ ಮಾಡಿಸಿದಂತಿದೆ. ಯಾಕಂದ್ರೆ, ಭಾರತವು ಚೀನಾ ಜೊತೆ ಗಡಿ ಹಂಚಿಕೊಂಡಿರೋ 3,488 ಕಿಲೋ ಮೀಟರ್‌ಗಳಲ್ಲಿ ಲಡಾಖ್‌ ಗಡಿಯೇ ದೊಡ್ಡ ಸವಾಲು. ಇಲ್ಲಿಯ ದುರ್ಗಮ ಪ್ರದೇಶದಲ್ಲಿ ನಿಂತು ಹೋರಾಟ ಮಾಡುವುದು ಸುಲಭವಲ್ಲ. ಇದೇ ಉದ್ದೇಶಕ್ಕೆ ಲಡಾಖ್‌ನಲ್ಲಿ ಭಾರತೀಯ ರಕ್ಷಣಾ ಇಲಾಖೆ ಎಂಆರ್‌-20 ಎಂಬ ಡ್ರೋನ್‌ಗಳ ಹಾರಾಟದ ಪ್ರಯೋಗ ನಡೆಸಿದೆ. ಮೊದಲ ಪ್ರಯತ್ನದಲ್ಲಿಯೇ ಭಾರತ ಯಶಸ್ಸು ಸಾಧಿಸಿದೆ. ಹಾಗಾದ್ರೆ ಈ ಡ್ರೋನ್‌ಗಳ ಉಪಯೋಗ ಏನು ಗೊತ್ತಾ? ಲಡಾಖ್‌ ಗಡಿಯಲ್ಲಿಯೇ ಇದರ ಸದುಪಯೋಗ ಹೆಚ್ಚಿದೆ ಯಾಕೆ ಗೊತ್ತಾ?

ಆಹಾರ, ವೈದ್ಯಕೀಯ ಉಪಕರಣ, ಶಸ್ತ್ರಾಸ್ತ್ರ ಹೊತ್ತು ಸಾಗುತ್ತವೆ
ಪರ್ವತ ಪ್ರದೇಶದಲ್ಲಿ 20 ಕೆಜಿ ತೂಕ ಹೊತ್ತು ಸಾಗುತ್ತೆ

ಭಾರತೀಯ ರಕ್ಷಣಾ ಇಲಾಖೆಯ ಕೈಸೇರಿರುವ ಎಂಆರ್‌-20 ಡ್ರೋನ್‌ನಳ ಬಗ್ಗೆ ಕೇಳಿದ್ರೆ ಹೆಮ್ಮೆಯಾಗುತ್ತದೆ. ಇಲ್ಲಿಯವರೆಗೂ ಲಡಾಖ್‌ ಗಡಿಯಲ್ಲಿ ಸೈನಿಕರು ಎದುರಿಸುತ್ತಿದ್ದ ಬಹುದೊಡ್ಡ ಸಮಸ್ಯೆಗೆ ಬ್ರೇಕ್‌ ಹಾಕಲಿದೆ. ಪ್ರತಿ ಕ್ಷಣವೂ ಸೈನಿಕರ ನೆರವಿಗೆ ನಿಲ್ಲಲಿದೆ. ಹೌದು, ಆಹಾರ, ವೈದ್ಯಕೀಯ ಉಪಕರಣ, ಶಸ್ತ್ರಾಸ್ತ್ರಗಳನ್ನು ಹೊತ್ತು ಡ್ರೋನ್‌ ಸಾಲಿದೆ. 20 ಕೇಜಿ ಭಾರತವನ್ನು ಹೊತ್ತು ಸುಮಾರು 20 ಕಿಲೋ ಮೀಟರ್‌ ದೂರ ಸಾಗುವ ಸಾಮರ್ಥ್ಯವನ್ನು ಹೊಂದಿವೆ.

ಇಲ್ಲಿಯವರೆಗೆ ಗಡಿ ಕಾಯುತ್ತಿರೋ ಸೈನಿಕರಿಗೆ ನಿರ್ದಿಷ್ಟ ಸಮಯಕ್ಕೆ ಊಟ ಸರಬರಾಜು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿಕೂಲ ವಾತಾವರಣದ ಸಂದರ್ಭದಲ್ಲಿ ವಿಳಂಬವಾಗಿ ಬಿಡ್ತಾ ಇತ್ತು. ಅಷ್ಟೇ ಅಲ್ಲ, ಸೈನಿಕರು ಗಾಯಗೊಂಡರೆ ಅವರಿಗೆ ತುರ್ತಾಗಿ ವೈದ್ಯಕೀಯ ಉಪಕರಣ ಕಳಿಸುವಲ್ಲಿಯೂ ವಿಳಂಬವಾಗುತ್ತಿತ್ತು. ಇನ್ನು ಶಸ್ತ್ರಾಸ್ತ್ರಗಳನ್ನೂ ಕಳಿಸಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲದರಲ್ಲಿಯೂ ವಿಳಂಬ ವಿಳಂಬ.

ಪ್ರತಿಕೂಲ ಹವಾಮಾನದಲ್ಲಿ ಹೆಲಿಕಾಪ್ಟರ್‌ ಸಂಚಾರಕ್ಕೆ ಅಡ್ಡಿ
ಹೆಲಿಕಾಪ್ಟರ್‌ ಪತನವಾಗಿ ಅದೆಷ್ಟೋ ಸೈನಿಕರ ಮರಣ

ಯುದ್ಧ ಇಲ್ಲದಿದ್ದರೂ ಲಡಾಖ್‌ ಗಡಿಯಲ್ಲಿ ನಮ್ಮ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಲೇ ಇದ್ರು. ಇದಕ್ಕೆಲ್ಲ ಪ್ರಮುಖ ಕಾರಣ ಪ್ರತಿಕೂಲ ವಾತಾವಾರಣವಾಗಿತ್ತು. ಅಂತಹ ಸಂದರ್ಭದಲ್ಲಿ ಸೈನಿಕರ ನೆರವಿಗೆ ಹೋಗುತ್ತಿದ್ದ ಹೆಲಿಕಾಪ್ಟರ್‌ಗಳು ಪತನವಾಗುತ್ತಿದ್ವು. ಇದರಿಂದ ಅದೆಷ್ಟೋ ಪೈಲೆಟ್‌ಗಳನ್ನು, ಸೈನಿಕರನ್ನು ಭಾರತ ಕಳೆದುಕೊಂಡಿದೆ. ಹೆಲಿಕಾಪ್ಟರ್‌ಗಳ ನಾಶದಿಂದ ಆರ್ಥಿಕ ನಷ್ಟವೂ ಆಗಿದೆ.

ಮುಂದೆ ಭಾರತ ಮತ್ತು ಚೀನಾ ನಡುವೆ ಯುದ್ಧವೇನಾದ್ರೂ ನಡೆದ್ರೆ ಲಡಾಖ್ ಗಡಿಯದ್ದೇ ಪ್ರಮುಖ ಸಮಸ್ಯೆಯಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ತುರ್ತಾಗಿ ಸೈನಿಕರ ನೆರವಿಗೆ ಯುದ್ಧಾಸ್ತ್ರಗಳನ್ನು ಪೂರೈಸುವುದು, ಆಹಾರ ಸರಬರಾಜು ಮಾಡುವುದು, ವೈದ್ಯಕೀಯ ಉಪಕರಣ ಕಳಿಸುವುದನ್ನು ಮಾಡಬೇಕು. ಅಂತಹ ಕೆಲಸದಲ್ಲಿ ವಿಳಂಬವಾದ್ರೆ ದೊಡ್ಡ ಪ್ರಮಾಣದ ಬೆಲೆ ತೆರಬೇಕಾಗುತ್ತೆ. ಎಲ್ಲಾ ಸಂದರ್ಭದಲ್ಲಿಯೂ ಹೆಲಿಕಾಪ್ಟರ್‌ಗಳನ್ನು ಹಾರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಇದೀಗ ಲಡಾಖ್‌ ಗಡಿಯಲ್ಲಿ ಪರೀಕ್ಷೆ ನಡೆಸಿರೋ ಡ್ರೋನ್‌ಗಳ ಪ್ರಯೋಗ ಆನೆಬಲ ತಂದಿದೆ. ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಸ್ಫೋಟಕ ಹೊತ್ತು ದಾಳಿ ನಡೆಸಬಲ್ಲವು

ಈ ಡ್ರೋನ್‌ಗಳು ಕೇವಲ ಆಹಾರವನ್ನು ಹೊತ್ತು ಸಾಗುವುದು, ವೈದ್ಯಕೀಯ ಉಪಕರಣ ಹೊತ್ತು ಸಾಗುವುದು, ಶಸ್ತ್ರಾಸ್ತ್ರಗಳನ್ನು ಉರ್ಯಾಫ್ ಹೊತ್ತು ಸಾಗುವುದನ್ನು ಮಾಡುವುದಿಲ್ಲ. ಇದರ ಜೊತೆ ಮತ್ತೊಂದು ಕೆಲಸ ಮಾಡುತ್ತವೆ. ಅದೇನಂದ್ರೆ, ನಿರ್ದಿಷ್ಟ ಗುರಿ ಅಳವಡಿಸಿ ಬಿಟ್ಟರೇ ಸ್ಫೋಟಕವನ್ನು ಹೊತ್ತು ಸಾಗಲಿವೆ. ನಿರ್ಧಿಷ್ಟ ಸ್ಥಳದಲ್ಲಿ ಸ್ಫೋಟ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ವೈರಿಪಡೆಯ ಟ್ಯಾಂಕರ್‌ಗಳ ಮೇಲೆ ಗುರಿ ಇಟ್ಟು ಹಾರಿಸಬಹುದು. ವೈರಿ ಪಡೆಯ ಸೈನಿಕರ ಮೇಲೆ ಗುರಿ ಇಟ್ಟು ಹಾರಿಸಬಹುದು. ಹುಡುಕಿ, ಸುತ್ತುವರೆದು ಗುರಿಯನ್ನು ಉಡಾಯಿಸಬಲ್ಲವು. ಹೀಗಾಗಿ ಸೈನಿಕರೇ ವೈರಿ ಪಡೆಗೆ ಹೋಗಿ ದಾಳಿ ಮಾಡಬೇಕು ಅನ್ನೋದು ಇಲ್ಲ. ಸುಮಾರು 20 ಕಿಲೋ ಮೀಟರ್‌ ದೂರದಲ್ಲಿಯೇ ಇದ್ದುಕೊಂಡು ದಾಳಿ ಮಾಡಬಹುದು.

ಮೇಕ್‌ ಇನ್‌ ಇಂಡಿಯಾ ಡ್ರೋನ್‌ಗಳು
ಉರ್ಯಾಫ್ ಎಂಫಿಬರ್‌ ಕಂಪನಿಯಿಂದ ತಯಾರಿಕೆ

ಈ ಮೊದಲು ಭಾರತ ಆಧುನಿಕ ರಕ್ಷಣಾ ತಂತ್ರಜ್ಞಾನ, ಸಾಧನ ಸಲಕರಣೆಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿತ್ತು. ಅದರಲ್ಲಿಯೂ ಅಮೆರಿಕ, ರಷ್ಯಾ, ಇಸ್ರೇಲ್‌ ರಾಷ್ಟ್ರಗಳನ್ನು ಭಾರತ ಅವಲಂಬಿಸಿತ್ತು. ಆದ್ರೆ, ಈಗ ಪರಿಸ್ಥಿತಿ ಬದಲಾಗಿದೆ. ಅದರಲ್ಲಿಯೂ ಕಳೆದ 10 ವರ್ಷಗಳ ಅವಧಿಯಲ್ಲಿ ಭಾರೀ ಪ್ರಮಾಣದ ಬದಲಾವಣೆಯನ್ನು ಭಾರತ ನೋಡುತ್ತಿದೆ. ಅಂದ್ರೆ, ಭಾರತದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳು, ಸಾಧನ ಸಲಕರಣೆಗಳು, ಶಸ್ತ್ರಾಸ್ತ್ರಗಳು ನಿರ್ಮಾಣವಾಗುತ್ತಿವೆ. ವಾಯುಪಡೆ, ಭೂಪಡೆ, ನೌಕಾಪಡೆಗೆ ಈಗಾಗಲೇ ಸಾಲು ಸಾಲು ಮೇಕ್‌ ಇನ್‌ ಇಂಡಿಯಾ ಶಸ್ತ್ರಾಸ್ತ್ರಗಳು ಸೇರ್ಪಡೆಯಾಗಿವೆ. ಇದೀಗ ಭಾರತೀಯ ರಕ್ಷಣಾ ಪಡೆಯನ್ನು ಸೇರಿರುವ ಎಂಆರ್‌-20 ಡ್ರೋನ್‌ಗಳು ಕೂಡ ಮೇಕ್‌ ಇನ್‌ ಇಂಡಿಯಾ ಡ್ರೋನ್‌ಗಳಾಗಿವೆ. ಇದು ಭಾರತೀಯರ ಹೆಮ್ಮೆಯ ಸಂಕೇತವಾಗಿದೆ.

ಭಾರತಕ್ಕೆ ಚೀನಾ ಯಾವತ್ತಿದ್ರೂ ಅಪಾಯಕಾರಿ

ಭಾರತಕ್ಕೆ ವೈರಿ ರಾಷ್ಟ್ರಗಳು ಅಂತ ಇರೋದು ಒಂದು ಪಾಕಿಸ್ತಾನ ಮತ್ತೊಂದು ಚೀನಾ. ಪಾಕಿಸ್ತಾನ ಈಗಾಗಲೇ ನಾಲ್ಕು ಭಾರಿ ಭಾರತದ ವಿರುದ್ಧ ಯುದ್ಧ ಮಾಡಿ ಸೋಲು ಕಂಡಿದೆ. ನೇರವಾಗಿ ಯುದ್ಧ ಮಾಡಿ ಗೆಲ್ಲುವ ಸಾಮರ್ಥ್ಯ ಅದಕ್ಕೆ ಇಲ್ಲವೇ ಇಲ್ಲ. ಹೀಗಾಗಿಯೇ ಭಯೋತ್ಪಾದಕರನ್ನು ಬಳಸಿಕೊಂಡು ವಾಮ ಮಾರ್ಗದಲ್ಲಿ ಭಾರತದ ವಿರುದ್ಧ ಹಗೆತನ ಸಾಧಿಸುತ್ತಿದೆ. ಆದ್ರೆ, ಸದ್ಯದ ಪಾಕಿಸ್ತಾನದ ಪರಿಸ್ಥಿತಿ ನೋಡಿದ್ರೆ, ಅದಕ್ಕೆ ಯುದ್ಧ ಮಾಡುವ ಸಾಮರ್ಥ್ಯ ಇಲ್ಲ. ಯಾಕಂದ್ರೆ, ಅಲ್ಲಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟು ಹೋಗಿದೆ. ಆದ್ರೆ, ಚೀನಾ ವಿಚಾರದಲ್ಲಿ ಭಾರತ ನಿರ್ಲಕ್ಷ ಮಾಡಲು ಸಾಧ್ಯವಾವಿಲ್ಲ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಭಾರಿ ಮುನ್ನಡೆಯಲ್ಲಿದೆ. ಅತ್ಯಾಧುನಿಕ ಯುದ್ಧಾಸ್ತ್ರಗಳು ಕೂಡ ಚೀನಾ ಬಳಿ ಇವೆ. ಹೀಗಾಗಿ ಚೀನಾ ಮೇಲೆ ಭಾರತ ಹದ್ದಿನ ಕಣ್ಣಿಟ್ಟು ನೋಡಬೇಕಾಗಿದೆ. ಈ ನಡುವೆ ಎಂಆರ್‌-20 ಡ್ರೋನ್‌ ಭಾರತೀಯ ಸೈನಿಕರ ಆತ್ಮವಿಶ್ವಾಸ ಹೆಚ್ಚಿಸಿದೆ.

- Advertisement -

Related news

error: Content is protected !!