Monday, April 29, 2024
spot_imgspot_img
spot_imgspot_img

ಭಾರೀ ಕುತೂಹಲ ಕೆರಳಿಸಿರುವ ಪುತ್ತೂರು ವಿಧಾನಸಭಾ ಕ್ಷೇತ್ರ..! ಅಂತಿಮ ಪಟ್ಟಿಯಲ್ಲಿ ಟಫ್ ಫೈಟ್. .ರೇಸ್‌ನಲ್ಲಿರುವ ಅಭ್ಯರ್ಥಿಗಳು ಯಾರು? ಯಾರ ಪಾಲಾಗುತ್ತೇ ಕೈ, ಕಮಲ ಪಕ್ಷದ ಅಂತಿಮ ಟಿಕೆಟ್?

- Advertisement -G L Acharya panikkar
- Advertisement -

2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ರಾಜ್ಯಾದ್ಯಂತ ತಯಾರಿ ಆರಂಭವಾಗಿದೆ. ರಾಜಕೀಯ ಪಕ್ಷಗಳು ನಿಧಾನವಾಗಿ ಎಲ್ಲಾ ತಯಾರಿ ಆರಂಭಿಸಿದ್ದಾರೆ. ಮತದಾರರನ್ನು ಒಲಿಸುವ ತಂತ್ರ ಒಂದೆಡೆಯಾದರೆ ಟಿಕೆಟ್ ಯಾರಿಗೆ ಎಂಬ ಲೆಕ್ಕಾಚಾರವೂ ಆರಂಭವಾಗಿದೆ.

ಹೀಗಿರುವಾಗ ದಕ್ಷಿಣ ಕನ್ನಡ ಕ್ಷೇತ್ರದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲೊಂದಾಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ರಾಜಕೀಯ ಹೇಗಿದೆ? ಇಲ್ಲಿನ ಟಿಕೆಟ್ ಆಕಾಂಕ್ಷಿಗಳು ಯಾರು? ಕೈ ಹಾಗೂ ಕಮಲ ಪಡೆಯ ಟಿಕೆಟ್ ಯಾರಿಗೆ ಸಿಗಬಹುದು? ಎಂಬುವುದು ಮತದಾರರಲ್ಲಿ ಕುತೂಹಲ ಮೂಡಿಸಿದೆ. ಕಳೆದ ಚುಣಾವಣೆಗೆ ಹೋಲಿಸಿದರೆ ಈ ಬಾರಿಯ ಚುಣಾವಣೆ ಕುರಿತು ಜನರಲ್ಲಿ ಹೆಚ್ಚು ಆಸಕ್ತಿ ಕಂಡುಬಂದಿದ್ದು.. ರಾಜಕೀಯ ಪಕ್ಷಗಳಲ್ಲಿ ಭಾರೀ ಪೈಪೋಟಿಯ ನಡುವೆ ತಮ್ಮ ಪಕ್ಷದ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲು ಕಸರತ್ತು ನಡೆಯುತ್ತಿದೆ.

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಬದಲಾವಣೆ ಕಂಡುಬರುವ ಹೆಚ್ಚಿನ ಸಾಧ್ಯತೆ ಇದೆ. ಹೆಚ್ಚಿನ ಕ್ಷೇತ್ರದಲ್ಲಿ ಕಾಂಗ್ರೇಸ್ ಅರ್ಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಗೊಂಡಿದ್ದು, ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಇನ್ನು ಬಿಡುಗಡೆಗೊಳಿಸದೇ ಇರುವುದು ಮತದಾರರಲ್ಲಿ ಇನ್ನಷ್ಟು ಹೆಚ್ಚಿನ ಕುತೂಹಲ ಮೂಡಿಸಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಅಶೋಕ್ ಕುಮಾರ್ ರೈಯವರ ಹೆಸರು ಅಂತಿಮ ಅಭ್ಯರ್ಥಿಗಳ ಪಟ್ಟಿಯಲ್ಲಿದೆ.

ಬಿಜೆಪಿ ಪಕ್ಷದ ಅಂತಿಮ ಪಟ್ಟಿಯಲ್ಲಿ ಸಂಜೀವ ಮಠಂದೂರು, ಕಿಶೋರ್ ಬೊಟ್ಯಾಡಿ, ಹಾಗೂ ಯತೀಶ್ ಆರ‍್ವಾರ ಹೆಸರು ರೇಸ್‌ನಲ್ಲಿದೆ.

ಒಟ್ಟಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಮತದಾರರಲ್ಲಿ ಭಾರೀ ಕುತೂಹಲ ಸೃಷ್ಟಿಯಾಗಿದ್ದು, ಭರ್ಜರಿ ಪೈಪೋಟಿಯ ನಡುವೆ ಟಿಕೆಟ್ ಅಂತಿಮ ಯಾರ ಪಾಲಾಗುತ್ತೇ ಎಂಬುವುದನ್ನು ಕಾದುನೋಡಬೇಕಿದೆ.

- Advertisement -

Related news

error: Content is protected !!