Friday, May 3, 2024
spot_imgspot_img
spot_imgspot_img

ಮಂಗಳೂರಿನಿಂದ ಕಾಶ್ಮೀರದ ವೈಷ್ಣೋದೇವಿಗೆ ತೆರಳಲು ಹೆಲಿಕಾಪ್ಟರ್‌ ಬುಕ್ಕಿಂಗ್‌; ಆನ್‌ಲೈನ್‌ ವಂಚನೆಗೊಳಗಾದ ಟೆಕ್ಕಿ

- Advertisement -G L Acharya panikkar
- Advertisement -

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬಂದ ಟೆಕ್ಕಿಯೋರ್ವರು ಕಾಶ್ಮೀರದ ವೈಷ್ಣೋದೇವಿ ಮಂದಿರಕ್ಕೆ ತೆರಳಲು ಹೆಲಿಕಾಪ್ಟರ್‌ ಬುಕ್ಕಿಂಗ್‌ ಮಾಡಿ ಆನ್‌ಲೈನ್‌ ವಂಚನೆಗೆ ಒಳಗಾಗಿದ್ದರೆ.

ಮಾ. 3ರಂದು ಘಟನೆ ನಡೆದಿದ್ದು, ಮಂಗಳೂರಿನಲ್ಲಿ ಸುತ್ತಾಡಿದ ಬಳಿಕ ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ನೇರವಾದ ವಿಮಾನ ಸೌಲಭ್ಯ ಇದೆಯೇ ಎಂದು ಗೂಗಲ್‌ ಸರ್ಚ್‌ ಮಾಡಿದ್ದಾರೆ. ಈ ವೇಳೆ ವಿಮಾನ ಇಲ್ಲದಿರುವುದು ತಿಳಿದು, ಖಾಸಗಿ ಹೆಲಿಕಾಪ್ಟರ್‌ ಇದೆಯೇ ಎಂದು ಸರ್ಚ್‌ ಮಾಡಿದಾಗ, ವೆಬ್‌ಸೈಟ್‌ ಒಂದು ಸಿಕ್ಕಿದೆ. ಆದನ್ನು ಸಂಪರ್ಕಿಸಿದಾಗ, ನಿತಿನ್‌ ಎನ್ನುವ ವ್ಯಕ್ತಿ ಫೋನ್‌ ಕರೆಗೆ ಸಿಕ್ಕಿದ್ದು, ಆತ ತನ್ನನ್ನು ವೈಷ್ಣೋದೇವಿ ದೇವಸ್ಥಾನದ ಪ್ರತಿನಿಧಿಯೆಂದು ಹೇಳಿಕೊಂಡಿದ್ದ.

ಬುಕ್ಕಿಂಗ್‌ ಅಡ್ವಾನ್ಸ್‌ ಎಂದು 38,060 ರೂ. ಕಳುಹಿಸಿ ಕೊಡಲು ಹೇಳಿದ್ದು, ಅದರಂತೆ ಆತ ಕಳಿಸಿದ ಕ್ಯೂಆರ್‌ ಕೋಡ್‌ಗೆ ಹಣ ಕಳಿಸಿದ್ದಾರೆ. ಅನಂತರ ಕರೆ ಮಾಡಿದಾಗ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ದೇವಸ್ಥಾನಕ್ಕೆ ಕರೆ ಮಾಡಿದಾದ ತಮ್ಮಲ್ಲಿ ಅಂತಹ ಯಾರೇ ಪ್ರತಿನಿಧಿ ಇಲ್ಲವೆಂದು ಹೇಳಿದ್ದು, ಈ ವೇಳೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಅದರಂತೆ ಮಂಗಳೂರಿಗೆ ಬಂದು ಸೈಬರ್‌ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.

vtv vitla
- Advertisement -

Related news

error: Content is protected !!