Friday, June 27, 2025
spot_imgspot_img
spot_imgspot_img

ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಕೇರಳದಲ್ಲಿ ಅಪಘಾತಕ್ಕೆ ಬಲಿ

- Advertisement -
- Advertisement -

ಕೇರಳ: ದ್ವಿಚಕ್ರ ವಾಹನ ಅಪಘಾತ ಸಂಭವಿಸಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ನಡೆದಿದೆ. ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಫೌಜಿಯಾ ಹಕೀಂ ಮೃತಪಟ್ಟ ಯುವತಿ.

ಕೇರಳ ಮೂಲದ ವಿದ್ಯಾರ್ಥಿನಿಯಾದ ಫೌಜಿಯಾ ಅಲಪ್ಪುರಂನ ಅಲುವಾದಲ್ಲಿ ಸ್ಕೂಟರ್‌ನಲ್ಲಿ ತನ್ನ ಮನೆಯತ್ತ ಬರುವಾಗ ಅಪಘಾತ ಸಂಭವಿಸಿದೆ ಮಂಗಳೂರಿನಿಂದ ರೈಲಿನಲ್ಲಿ ಅಲುವಾ ತಲುಪಿದ ಫೌಜಿಯಾ ಸ್ಕೂಟರ್ ನಲ್ಲಿ ಮನೆಯತ್ತ ಬರುವಾಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ನೀಡುವಾಗ, ಸ್ಕೂಟರ್ ನೀರಿಗೆ ಇಳಿದು ನಿಯಂತ್ರಣ ಕಳೆದುಕೊಂಡು ಬಿದ್ದಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

- Advertisement -

Related news

error: Content is protected !!