Tuesday, May 7, 2024
spot_imgspot_img
spot_imgspot_img

ಮಂಗಳೂರು: ಆಕಾಶ್‌ಭವನ್‌ ಶರಣ್‌ ಹಾಗೂ ಪಿಂಕಿ ನವಾಜ್‌ ನನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಆದೇಶ

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರು ನಗರ ಕಮೀಷನರೇಟ್‌ ವ್ಯಾಪ್ತಿಯ ಕ್ರಿಮಿನಲ್‌ ಪ್ರಕರಣದ ಹಿನ್ನೆಲೆಯುಳ್ಳ ಇಬ್ಬರು ಆರೋಪಿಗಳ ಮೇಲೆ ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಆದೇಶ ಹೊರಡಿಸಿದ್ದಾರೆ.

ರೋಹಿದಾಸ್‌ ಅಲಿಯಾಸ್‌ ಆಕಾಶ್‌ಭವನ್‌ ಶರಣ್‌ ಹಾಗೂ ಮಹಮ್ಮದ್‌ ನವಾಜ್‌ ಯಾನೆ ಪಿಂಕಿ ನವಾಜ್‌ ನನ್ನು ಬಂಧಿಸುವಂತೆ ಆದೇಶ ಹೊರಡಿಸಲಾಗಿದೆ.

vtv vitla
vtv vitla

ಆಕಾಶಭವನ್‌ ಶರಣ್‌
ರೋಹಿದಾಸ್‌ ಮೇಲೆ 2008ರಿಂದ 2022ರವರೆಗೆ 20ಕ್ಕೂ ಹೆಚ್ಚಿನ ವಿವಿಧ ಪ್ರಕರಣ ದಾಖಲಾಗಿದೆ. ಪೋಕ್ಸೋ, ಸುಲಿಗೆ, ಕೊಲೆಯತ್ನ, ದಲಿತ ನಿಂದನೆ ಹೀಗೆ ಹಲವು ಪ್ರಕರಣ ದಾಖಲಾಗಿದೆ.

ಜೊತೆಗೆ 2020ರಲ್ಲಿ ಕೊಲೆಯಾದ ಸುರೇಂದ್ರ ಬಂಟ್ವಾಳ್‌ ಕೊಲೆಯ ಪ್ರಕರಣದಲ್ಲೂ ಭಾಗಿಯಾಗಿದ್ದ ಎಂಬ ಅಂಶ ಬಯಲಾಗಿದೆ. ಮಂಗಳೂರು ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ 15 ಪ್ರಕರಣ ದಾಖಲಾಗಿದೆ.

ಪಿಂಕಿ ನವಾಜ್‌
2018ರಲ್ಲಿ ಕೊಲೆಯಾದ ದೀಪಕ್‌ ರಾವ್‌ ಕೊಲೆ ಪ್ರಕರಣದ ಆರೋಪಿ ಪಿಂಕಿ ನವಾಜ್‌ ಮೇಲೆ ಮಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ 12 ಪ್ರಕರಣ ಜಿಲ್ಲೆಯಲ್ಲಿ 3 ಪ್ರಕರಣ ಸೇರಿ ಒಟ್ಟು 15 ಪ್ರಕರಣ ದಾಖಲಾಗಿದೆ.

ಆದ್ದರಿಂದ ಈತನ ಮೇಲೂ ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶ ನೀಡಲಾಗಿದೆ. ವಿಶೇಷ ಅಂದರೆ ಆತ ನಿನ್ನೆಯವರೆಗೂ ಮೈಸೂರು ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಬಂದಾಗ ಮಂಗಳೂರು ಪೊಲಿಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

vtv vitla
vtv vitla
- Advertisement -

Related news

error: Content is protected !!