Friday, May 3, 2024
spot_imgspot_img
spot_imgspot_img

ಮಂಗಳೂರು ಕಡಲ ಕಿನಾರೆಯಲ್ಲಿ ಡಾಲ್ಫಿನ್‌ ಮೀನಿನ ಮೃತದೇಹ ಪತ್ತೆ : ಸಾವಿಗೆ ಕಾರಣವೇನು??

- Advertisement -G L Acharya panikkar
- Advertisement -

ಮಂಗಳೂರು: ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಡಾಲ್ಫಿನ್‌ ಮೀನಿನ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಫಾತಿಮಾ ಚರ್ಚ್ ಭಾಗದಲ್ಲಿ ಭಾರಿ ಗಾತ್ರದ ಮೀನು ದಡಕ್ಕೆ ಬಂದು ಬಿದ್ದಾಗ ಅಲ್ಲಿದ್ದವರು ಕುತೂಹಲದಿಂದ ಅದರತ್ತ ಓಡಿದ್ದರು. ಫೆರಿ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಬ್ಲೂ ಫ್ಲ್ಯಾಗ್ ಯೋಜನೆಯ ಕಾರ್ಮಿಕರು, ತಣ್ಣೀರು ಬಾವಿ ಬೀಚ್ ನಿರ್ವಹಣೆ ಮಾಡುತ್ತಿರುವ ಯೋಜಕ್ ಸಂಸ್ಥೆ, ಸಿಬ್ಬಂದಿ ಮತ್ತು ಲೈಫ್ ಗಾರ್ಡ್‌ಗಳು, ಮೀನಿನ ಶವವನ್ನು ಹಗ್ಗದಲ್ಲಿ ಕಟ್ಟಿ ಎಳೆದು ಮರಳಿನ ಮೇಲೆ ತಂದರು.

ನಂತರ ಪಣಂಬೂರು ಪೊಲೀಸರಿಗೂ ಕರಾವಳಿ ಕಾವಲು ಪಡೆಯವರಿಗೂ ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಯಿತು, ಅಧಿಕಾರಿಗಳು ಸ್ಥಳಕ್ಕೆ ಬಂದ ನಂತರ ಅರಣ್ಯ ಇಲಾಖೆಯ ಪರವಾಗಿ ರೀಫ್ ವಾಚ್ ಮರೈನ್ ಕನ್ಸರ್ವೇಷನ್ ಸಂಸ್ಥೆಯ ಕರ್ನಾಟಕ ಸಂಯೋಜಕಿ ತೇಜಸ್ವಿನಿ ಅವರು ಮೀನಿನ ಮರಣೋತ್ತರ ಪರೀಕ್ಷೆ ನಡೆಸಿದರು.

ನಂತರ ಎಲ್ಲ ಪ್ರಕ್ರಿಯೆ ಮುಗಿದ ನಂತರ ಐದು ಅಡಿ ಆಳದ ಹೊಂಡ ತೋಡಿ ಮೀನನ್ನು ಅದರಲ್ಲಿ ಮುಚ್ಚಿದ್ದೇವೆ. ಅಲೆಗಳ ಜೊತೆಯಲ್ಲಿ ಮೀನಿನ ಮೃತದೇಹ ದಡಕ್ಕೆ ಸೇರಿತು.

‘ಕೊಳೆತ ಮೀನಿನ ಸಾವಿಗೆ ನಿಖರ ಕಾರಣಗಳನ್ನು ತಿಳಿಯುವುದು ಕಷ್ಟಸಾಧ್ಯ , ಈ ಡಾಲ್ವಿನ್ ಮೀನು ಹಸಿವು, ಆಮ್ಲಜನಕ ಸಿಗದೆ ಮತ್ತು ಸೋಂಕಿನಿಂದ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. ಬಲೆಯಲ್ಲಿ ಸಿಲುಕಿದ್ದರಿಂದ ಮೇಲೆ ಬಂದು ಉಸಿರಾಡಲು ಸಾಧ್ಯವಾಗದೆಯೂ ಇರಬಹುದು. ಎಂದು ಅಧಿಕಾರಿಗಳು ಮಾದ್ಯಮಕ್ಕೆ ತಿಳಿಸಿದ್ದಾರೆ.

- Advertisement -

Related news

error: Content is protected !!