Friday, May 3, 2024
spot_imgspot_img
spot_imgspot_img

ಮಂಗಳೂರು: ಕರ್ನಾಟಕ-ಕೇರಳ ಗಡಿ ಭಾಗದ ತಲಪಾಡಿ ಚೆಕ್‌ಪೋಸ್ಟ್‌ಗೆ ಲೋಕಾಯುಕ್ತ ದಾಳಿ; ದಾಖಲೆ ಪರಿಶೀಲನೆ

- Advertisement -G L Acharya panikkar
- Advertisement -

ಮಂಗಳೂರು: ಕರ್ನಾಟಕ-ಕೇರಳ ಗಡಿ ಭಾಗದ ಉಳ್ಳಾಲದ ತಲಪಾಡಿ ಬಳಿ ಇರುವ ಆರ್‌ಟಿಒ ಕಚೇರಿಗೆ ನಿನ್ನೆ ಲೋಕಾಯುಕ್ತ ಎಸ್ ಪಿ ಲಕ್ಷ್ಮೀ ಗಣೇಶ್ ನೇತೃತ್ವದ ತಂಡ ದಾಳಿ ನಡೆಸಿ ಸತತ ಮೂರು ಗಂಟೆಗಳಿಂದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಎಸ್‌ಪಿ ಲಕ್ಷ್ಮೀ ಗಣೇಶ್‌ರವರು ಈ ಹಿಂದೆ ಮಂಗಳೂರು ಕಮೀಷನರ್‌ ವ್ಯಾಪ್ತಿಯ ಡಿಸಿಪಿಯಾಗಿದ್ದರು.

ಕೇರಳ-ಮಂಗಳೂರು ಮಧ್ಯೆ ಸಂಚರಿಸುತ್ತಿರುವ ಲಾರಿಗಳನ್ನು ತಪಾಸಣೆ ನೆಪದಲ್ಲಿ ತಡೆದು ನಿಲ್ಲಿಸಿ ಲಂಚಕ್ಕಾಗಿ ಸತಾಯಿಸುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ತಲಪಾಡಿ ಆರ್‌ಟಿಒ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

ಲಾರಿ ಚಾಲಕರಿಂದ ಲಂಚ ಪಡೆಯುತ್ತಿರುವ ಸಂಬಂಧ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ನಿನ್ನೆ ಎಸ್ಪಿ ಲಕ್ಷ್ಮಿ ಗಣೇಶ್ ನೇತೃತ್ವ ದ ತಂಡ ದಾಳಿ ನಡೆಸಿದೆ. ಲಾರಿ ಚಾಲಕರಿಂದ ಲಂಚ ಪಡೆಯುವ ಆರೋಪಗಳು ಈ ಹಿಂದೆ ಹಲವು ಬಾರಿ ಕೇಳಿಬಂದಿತ್ತು. ಈ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!