Thursday, May 2, 2024
spot_imgspot_img
spot_imgspot_img

ಮಂಗಳೂರು : ಗ್ಯಾರೇಜ್‌ನಲ್ಲಿ ಭಾರೀ ಬೆಂಕಿ ಅವಘಡ ; ಲಕ್ಷಾಂತರ ರೂ. ನಷ್ಟವಾಗಲು ಕಾರಣವಾಯಿತಾ ಮಂಗಳಮುಖಿಯರ ಈ ಕೆಲಸ…? ಸ್ಥಳೀಯರ ಆರೋಪ

- Advertisement -G L Acharya panikkar
- Advertisement -

ಮಂಗಳೂರು : ಭಾರೀ ಬೆಂಕಿ ಅನಾಹುತಕ್ಕೆ ಗ್ಯಾರೆಜ್ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಮಂಗಳೂರು ಹೊರವಲಯದ ಜಪ್ಪಿನಮೊಗರು ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66 ಬದಿಯಲ್ಲಿರುವ ವಾಹನ ದುರಸ್ಥಿ ಮಾಡುವ ಗ್ಯಾ ರೇಜ್ ಸಂಪೂರ್ಣ ಹೊತ್ತಿ ಉರಿಯುತ್ತಿದ್ದು ಹತ್ತಾರು ವಾಹನಗಳು ಬೆಂಕಿಗೆ ಸ್ಥಳಕ್ಕೆ ಅಗ್ನಿ ಶಾಮಕ ದಳ ವಾಹನಗಳು, ಪೊಲೀಸ್ ಅಧಿಕಾರಿಗಳು ಧಾವಿಸಿ ಬಂದಿದ್ದು ಬೆಂಕಿ ಆರಿಸಿದ್ದಾರೆ. ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಪೋಟಗೊಂಡು ಈ ಅವಘಡ ಸಂಭವಿಸಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಸ್ಥಳೀಯರ ಆರೋಪವೇನು..?

ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರಿನಲ್ಲಿ ಇರುವ ಗ್ಯಾರೇಜೊಂದರಲ್ಲಿ ಕಳೆದ ಹಲವು ವರ್ಷಗಳಿಂದ ದುರಸ್ತಿಗೆಂದು ನಿಲ್ಲಿಸಿದ್ದ ಹಳೆಯ ಬಸ್ಸಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಸಂಪೂರ್ಣ ಸುಟ್ಟು ಕರಕಲಾಗಿದೆ. ಜಪ್ಪಿನಮೊಗರು ಹೆದ್ದಾರಿ ಬದಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಮಂಗಳಮುಖಿಯರು ಇದೇ ಡಕೋಟ ಬಸ್ಸನ್ನು ತಮ್ಮ ಅಡ್ಡೆಯನ್ನಾಗಿಸಿದ್ದರೆಂದು ಸ್ಥಳೀಯರು ಹೇಳಿದ್ದಾರೆ.

ಮಂಗಳಮುಖಿಯರ ರಾತ್ರಿ ಪಾಳಿ ಗಿರಾಕಿಗಳು ಸಿಗರೇಟ್ಸ್‌ ಸೇದಿ ಎಸೆದ ಪರಿಣಾಮ ಘಟನೆ ಸಂಭವಿಸಿರಬಹುದೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಗ್ಯಾರೇಜ್ ಬಳಿಯಲ್ಲೇ ಇರುವ ಟ್ರಾನ್ಸ್ ಫಾರ್ಮರಿನಿಂದ ಕಿಡಿ ಹೊರಸೂಸಿ ಅದರಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಯಿದೆ ಎಂದಿದ್ದಾರೆ. ಸ್ಥಳದಲ್ಲಿದ್ದ ಟೈರ್ ಗಳೂ ಬೆಂಕಿಗೆ ಆಹುತಿಯಾಗಿವೆ.

ಮಂಗಳೂರಿನ ಕದ್ರಿ, ಕೆಪಿಟಿ, ಜಪ್ಪಿನಮೊಗರು, ತಲಪಾಡಿಯ ಹೆದ್ದಾರಿ ಇಕ್ಕೆಲಗಳಲ್ಲಿ ಮಂಗಳಮುಖಿಯರು ಖುಲ್ಲಂ, ಖುಲ್ಲ ವೇಶ್ಯಾವಾಟಿಕೆ ನಡೆಸುತ್ತಿದ್ದರೂ ಪೊಲೀಸ್ ಇಲಾಖೆ ಇದಕ್ಕೆ ಬ್ರೇಕ್ ಹಾಕುವ ಗೋಜಿಗೆ ಹೋಗಿಲ್ಲ. ಘಟನೆಯಿಂದ ಕೆಲ ಹೊತ್ತು ಹೆದ್ದಾರಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

- Advertisement -

Related news

error: Content is protected !!