Wednesday, July 2, 2025
spot_imgspot_img
spot_imgspot_img

ಮಂಗಳೂರು : ಚುನಾವಣಾ ಕರ್ತವ್ಯಗಳಿಗೆ ಸಂಬಂಧಿಸಿ ಎಸ್.ಪಿ ಅಮಾತೆ ವಿಕ್ರಮ್ ರವರಿಂದ ವಿಶೇಷ ಮಾಹಿತಿ ಕಾರ್ಯಾಗಾರ

- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣೆಗೆ ಸಂಬಂಧಿಸಿದ ಕರ್ತವ್ಯ ನಿರ್ವಹಿಸುವ ಎಲ್ಲಾ ನೋಡಲ್ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಚುನಾವಣೆ ಕರ್ತವ್ಯಗಳಿಗೆ ಸಂಬಂಧಿಸಿದ ವಿಶೇಷ ಕಾರ್ಯಾಗಾರ ನಡೆಸಲಾಯಿತು.

ಕಾರ್ಯಾಗಾರದಲ್ಲಿ ಚುನಾವಣೆಗೆ ಸಂಬಂಧಿಸಿದ ಕರ್ತವ್ಯಗಳು ಹಾಗೂ ಸಿದ್ಧತೆಗಳ ಬಗ್ಗೆ , ಚುನಾವಣೆ ದೃಷ್ಟಿಯಿಂದ ತೆಗೆದು ಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ, ಚುನಾವಣೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ , ಚುನಾವಣೆ ನೀತಿ ಸಂಹಿತೆ ಇತ್ಯಾದಿ ವಿಷಯಗಳ ಬಗ್ಗೆ ಮಂಗಳೂರು ಎಸ್.ಪಿ ಅಮಾತೆ ವಿಕ್ರಮ್ ರವರು ತರಬೇತಿ ನೀಡಿದರು.

ವೇದಿಕೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ, ಬಂಟ್ವಾಳ ಉಪ ವಿಭಾಗದ ಡಿಎಸ್‌ಪಿ ಪ್ರತಾಪ್ ತೋರಟ್, ಡಿಎಸ್‌ಪಿ DCRB Dr. ಗಾನ ಪಿ. ಕುಮಾರ್, ಪುತ್ತೂರು ಉಪವಿಭಾಗ ಡಿಎಸ್‌ಪಿ ಡಾ. ವೀರಯ್ಯ ಹಿರೇಮಠ್ ಉಪಸ್ಥಿತರಿದ್ದರು.

.

- Advertisement -

Related news

error: Content is protected !!