- Advertisement -
- Advertisement -


ಮಂಗಳೂರು: ಕಾರು ಡಿವೈಡರ್ ದಾಟಿ ಕಂಟೈನರ್ ಗೆ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ಅಡ್ಯಾರ್ ಕಣ್ಣೂರು ಬಳಿ ಇಂದು ನಡೆದಿದೆ.

ಮಂಜೇಶ್ವರ ಕುಂಜತ್ತೂರು ನಿವಾಸಿ ಇಬ್ರಾಹೀಂ(32) ಮೃತಪಟ್ಟ ಕಾರು ಚಾಲಕ. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಾಯಗಳಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಕಾರಿನಲ್ಲಿ ಕುಂಜತ್ತೂರಿನಿಂದ ಬಿ.ಸಿ.ರೋಡ್ ಕಡೆಗೆ ತೆರಳುತ್ತಿದ್ದಾಗ ಕಾರಿನ ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಕಾರು ಡಿವೈಡರ್ ಮೇಲೆ ಪಾಸ್ ಆಗಿ ವಿರುದ್ಧ ದಿಕ್ಕಿನಿಂದ ಬಂದ ಕಂಟೈನರ್ ಗೆ ಡಿಕ್ಕಿ ಹೊಡೆದಿದೆ.


- Advertisement -