Monday, May 13, 2024
spot_imgspot_img
spot_imgspot_img

ಮಂಗಳೂರು: ನಕಲಿ ಚಿನ್ನ ಅಡವಿಟ್ಟು ₹26.99 ಲಕ್ಷ ವಂಚನೆ

- Advertisement -G L Acharya panikkar
- Advertisement -

ಮಂಗಳೂರು: ಫೈನಾನ್ಸ್‌ ಸಂಸ್ಥೆಯಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ದಂಪತಿಗಳು ವಂಚಿಸಿದ್ದು, ಬಗ್ಗೆ ನಗರದ ನೆಲ್ಲಿಕಾಯಿ ರಸ್ತೆ ಬಳಿಯ ಅಲ್ ರಬ್ಬಾ ಪ್ಲಾಜಾದಲ್ಲಿರುವ ಮಣಪ್ಪುರಂ ಫೈನಾನ್ಸ್ ಸಂಸ್ಥೆಯ ಅಧಿಕಾರಿಗಳು ದೂರು ನೀಡಿದ್ದು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಂಕಿ ಸ್ಟಾಂಡ್ ನಿವಾಸಿಗಳಾದ ಹಸ್ತಿಮಾಲ್ ಫರ್ಮಾರ್ ಮತ್ತು ಅವರ ಪತ್ನಿ ಸಂಗೀತ ಆರೋಪಿಗಳು.

ಮಣಪ್ಪುರಂ ಫೈನಾನ್ಸ್‌ ಸಂಸ್ಥೆಯಲ್ಲಿ ಒಟ್ಟು 795 ಗ್ರಾಂ ಚಿನ್ನಾಭರಣಗಳನ್ನು ಅಡ ಇಟ್ಟು ₹ 26.99 ಲಕ್ಷ ಸಾಲ ಪಡೆದಿದ್ದರು. ಅಡವಿಟ್ಟ ಆಭರಣಗಳು 22 ಕ್ಯಾರೆಟ್ ಚಿನ್ನದಿಂದ ತಯಾರಿಸಿದವು ಎಂದು ನಂಬಿಸಿದ್ದರು. ಅಡವಿಟ್ಟಿದ್ದ ಆಭರಣಗಳನ್ನು ಸಂಸ್ಥೆಯ ತಜ್ಞರು ಅ.01ರಂದು ಪರಿಶೀಲಿಸಿದಾಗ ಅವು ನಕಲಿ ಎಂಬುದು ದೃಢಪಟ್ಟಿತ್ತು.

‘ದಂಪತಿಗೆ ಫೈನಾನ್ಸ್ ವತಿಯಿಂದ ಹಲವು ಬಾರಿ ನೊಟೀಸ್‌ ಜಾರಿ ಮಾಡಲಾಗಿತ್ತು. ಪಡೆದ ಹಣವನ್ನು ಮರಳಿಸುವಂತೆ ದೂರವಾಣಿ ಕರೆ ಮಾಡಿಯೂ ಸೂಚಿಸಲಾಗಿತ್ತು. ಆದರೂ ಸಾಲವನ್ನು ಮರು ಪಾವತಿ ಮಾಡದೇ ದಂಪತಿ ವಂಚಿಸಿದ್ದಾರೆ’ ಎಂದು ಸಂಸ್ಥೆಯ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.

vtv vitla
- Advertisement -

Related news

error: Content is protected !!