Saturday, September 19, 2026
spot_imgspot_img
spot_imgspot_img

ಮಂಗಳೂರು: ನಗರದಿಂದ ಏರ್‌ಪೋರ್ಟ್‌ವರೆಗೆ ಬೆಂಗಳೂರು ಮಾದರಿ ಬಸ್ ಕಲ್ಪಿಸಲು ಮನವಿ: ಮನವಿಗೆ ಸ್ಪಂದಿಸಿದ ಸಚಿವ ಶ್ರೀರಾಮುಲು

- Advertisement -
- Advertisement -

ಮಂಗಳೂರು: ನಗರದಿಂದ ಮಂಗಳೂರು ಏಪೋರ್ಟ್ ವರೆಗೆ ಬೆಂಗಳೂರು ನಗರದ ಮಾದರಿಯಲ್ಲಿ ಬಸ್‌ಗಳನ್ನು ಕಲ್ಪಿಸಬೇಕು ಎಂದು ಪತ್ರಕರ್ತರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದ್ರು. ಇವರ ಮನವಿಗೆ ಸಚಿವ ಶ್ರೀ ರಾಮುಲು ಸ್ಪಂದಿಸಿದ್ದಾರೆ.

ಪತ್ರಕರ್ತರಾದ ರಾಘವ ಶರ್ಮಾ, ವಿಜಯವಾಣಿ ಮತ್ತು ಶ್ರೀ ಸಂತೋಷ್ ಹೊಸಹಳ್ಳಿ, ಪವರ್, ಟಿ.ವಿ., ವರದಿಗಾರರು, ನವದೆಹಲಿ ಹಾಗೂ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ ಇವರ ಕೋರಿಕೆಯ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಬೆಂಗಳೂರು ನಗರದಿಂದ ಬೆಂಗಳೂರು ಏಪೋರ್ಟ್ ವರೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿರುವ ಮಾದರಿಯಲ್ಲಿಯೇ ಸಾರ್ವಜನಿಕರ ಹಿತದೃಷ್ಟಿಯಿಂದ ಮಂಗಳೂರು ನಗರದಿಂದ ಮಂಗಳೂರು ಏಪೋರ್ಟ್‌ವರೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ನಿರ್ಧಾರ ಕೈಗೊಳ್ಳಲಾಗ್ತಿದೆ.

ಇದೀಗ ಪತ್ರದ ಮೂಲಕ ಸ್ಪಂದಿಸಿದ ಸಾರಿಗೆ ಇಲಾಖೆ ಕೋವಿಡ್ 19 ಹಿನ್ನೆಲೆಯಲ್ಲಿ ಬೆಂ.ಮ.ಸಾ.ಸಂಸ್ಥೆಯ ಬಸ್‌ಗಳ ಕಾರ್ಯಾಚರಣೆ ಕಡಿಮೆ ಇರುವುದರಿಂದ, ಮಂಗಳೂರು ನಗರದಿಂದ ಮಂಗಳೂರು ಏಪೋರ್ಟ್‌ವರೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಬೆಂ.ಮ.ಸಾ.ಸಂಸ್ಥೆಯಿಂದ 3 ಬಸ್‌ಗಳನ್ನು ಹಸ್ತಾಂತರಕ್ಕೆ ಪಡೆದು ಕ.ರಾ.ರ.ಸಾ.ನಿಗಮದಿಂದ ಕಾರ್ಯಾಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.

- Advertisement -

Related news

error: Content is protected !!