Wednesday, May 15, 2024
spot_imgspot_img
spot_imgspot_img

ಮಂಗಳೂರು: ನಟಿಯ ತಾಯಿ ಬಳಿ ನಕಲಿ ಪೊಲೀಸ್‌ ಹಣ ವಸೂಲಿ ಪ್ರಕರಣ; ಹೊರಬಿತ್ತು ತಾಯಿಯ ಮಸಾಜ್ ಪಾರ್ಲರ್​​ನ ಕಥೆ!

- Advertisement -G L Acharya panikkar
- Advertisement -
vtv vitla

ಮಂಗಳೂರು: ನಟಿ ಓರ್ವಳ ತಾಯಿ ಬಳಿ ನಕಲಿ ಪೊಲೀಸ್ ವೇಷಧಾರಿಯೊಬ್ಬ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರೋಪಿ ಅಂದರ್ ಆಗಿದ್ದು ಆತ ಪೊಲೀಸ್ ಅಲ್ಲ ಅನ್ನೊದು ಗೊತ್ತಾಗಿದೆ. ಆತ ಮಾಜಿ ಹೋಮ್ ಗಾರ್ಡ್ ಆಗಿದ್ದಾನೆ. ಪೊಲೀಸ್ ತನಿಖೆ ವೇಳೆ ಆತ ಮಸಾಜ್ ಪಾರ್ಲರ್ ನ ಚಿನ್ನದ ಕಥೆ ಹೇಳುತ್ತಿದ್ದಾನೆ. ವೇಶ್ಯಾವಾಟಿಕೆ ಹೆಸರಿನಲ್ಲಿ ಪೊಲೀಸರು ಹಣ ಪೀಕಿದ್ದಾರೆ ಅನ್ನೊ ಆರೋಪ ಕೇಳಿಬಂದಿತ್ತು. ಪ್ರಕರಣದ ಆರೋಪಿ ಬಂಧನವಾಗಿದ್ದಾನೆ. ಹಣ ವಸೂಲಿ ಮಾಡಿದ್ದು ಪೊಲೀಸ್ ಅಲ್ಲ ಅನ್ನೋದು ಈಗ ಬೆಳಕಿಗೆ ಬಂದಿದೆ. ಆದರೆ ಆತ ಮಾಜಿ ಹೋಮ್ ಗಾರ್ಡ್ ಆಗಿದ್ದವನು. ಈ ಮಾಜಿ ಹೋಮ್ ಗಾರ್ಡ್ ಈಗ ಬಂಧಿತ ಆರೋಪಿಯಾಗಿದ್ದಾನೆ.

ಆ ಮಹಿಳೆ ಮಂಗಳೂರು ನಿವಾಸಿ. ಮೂರ್ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸ್ವತಃ ಎರಡು ಕಡೆ ಮಸಾಜ್ ಪಾರ್ಲರ್ ನಡೆಸುತ್ತಿದ್ರು. ಈಗ ಮಕ್ಕಳೊಂದಿಗೆ ಮನೆಯಲ್ಲೇ ಇದ್ದಾರೆ. ಈಕೆಯ ಮಗಳು ಸಿನಿಮಾ ನಟಿ. ಈಕೆ ತನ್ನ ಮನೆಯಲ್ಲಿದ್ದಾಗ ಪೊಲೀಸ್ ವೇಷ ಹಾಕಿ ಬಂದ ಈ ಮಾಜಿ ಹೋಮ್ ಗಾರ್ಡ್ ಶಿವರಾಜ್ ದೇವಾಡಿಗೆ ತಾನು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಅಂತಾ ಪರಿಚಯಿಸಿಕೊಂಡಿದ್ದಾನೆ.

ನಿಮ್ಮ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಅಂತಾ ದೂರು ಬಂದಿದೆ. ಸಾಹೇಬ್ರು ರೈಡ್ ಮಾಡುತ್ತಾರೆ. ಅವರು ರೈಡ್ ಮಾಡಬಾರದು ಅಂದ್ರೆ 20 ಸಾವಿರ ಹಣ ನೀಡಿ ಅಂತಾ ಎರಡು ಬಾರಿ ಬ್ಲಾಕ್ ಮೇಲ್ ಮಾಡಿ ಒಟ್ಟು 38 ಸಾವಿರ ಹಣ ವಸೂಲಿ ಮಾಡಿದ್ದ. ಈ ಬಗ್ಗೆ ವರದಿ ಪ್ರಸಾರವಾಗಿತ್ತಿದ್ದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪೊಲೀಸರು ಆರೋಪಿ ಶಿವರಾಜ್ ದೇವಾಡಿಗನನ್ನು ಬಂಧಿಸಿದ್ದಾರೆ. ಬಂಧಿತ ಶಿವರಾಜ್ ದೇವಾಡಿಗೆ ಬೇರೆಯೆ ಕತೆಯನ್ನು ಹೇಳುತ್ತಿದ್ದಾನೆ. ಈ ಮಹಿಳೆ ನಡೆಸುತ್ತಿದ್ದ ಪಾರ್ಲರ್ ಗೆ ಗಿರಾಕಿಯಾಗಿ ಹೋಗಿದ್ದಾಗ ಆಕೆ ನನ್ನನ್ನು ಬ್ಲಾಕ್ ಮೇಲ್ ಮಾಡಿದ್ರು. ಕಿರುಚಿಕೊಂಡು ಹೊರಗಡೆ ಹೋಗಿ ನನಗೆ ಕಿರುಕುಳ ನೀಡಿದ ಅಂತಾ ಹೇಳುತ್ತೇನೆ ಅಂತಾ ಹೇಳಿ, ನನ್ನ ಬಳಿಯಿದ್ದ ಚಿನ್ನದ ಚೈನ್ ಕಿತ್ತುಕೊಂಡಿದ್ರು. ಆದ್ರಿಂದ ನಾನು ಈಕೆಗೆ ಹೀಗೆ ಬ್ಲಾಕ್ ಮೇಲ್ ಮಾಡಿ ಹಣವನ್ನು ವಸೂಲಿ ಮಾಡಿದೆ ಅಂತಾ ಹೇಳಿದ್ದಾನೆ ಬಂಧಿತ ಆರೋಪಿ ಶಿವರಾಜ್ ದೇವಾಡಿಗ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಮಹಿಳೆ, ಈತ ನನ್ನ ಕಸ್ಟಮರ್ ಆಗರಲಿಲ್ಲ. ಆ ವ್ಯಕ್ತಿಯನ್ನು ನಾನು ಅವತ್ತು ಮೊದಲನೇ ಸಲ ನೋಡಿದ್ದು. ನಾನು ಆತನ ಬಳಿ ಯಾವುದೇ ಚಿನ್ನದ ಚೈನ್ ಕಿತ್ತುಕೊಂಡಿಲ್ಲ. ಆತನೇ ಸುಳ್ಳು ಹೇಳುತ್ತಿದ್ದಾನೆ ಅಂತಾ ಮಹಿಳೆ ಹೇಳಿದ್ದಾರೆ.

ಸದ್ಯ ಕಾವೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಹೋಮ್ ಗಾರ್ಡ್ ಆಗಿದ್ದ ಶಿವರಾಜ್ ಗೆ ಪೊಲೀಸರ ಹಾವಭಾವ ಗೊತ್ತಾಗಿದ್ದಿದ್ದರಿಂದ ಅವರ ರೀತಿ ಆಕ್ಟಿಂಗ್ ಮಾಡಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾನೆ. ಇನ್ನು ಆರೋಪಿ ಪ್ರಕಾರ ಚಿನ್ನದ ಚೈನ್ ವಸೂಲಿ ರಿವೇಂಜ್ ಆಗಿದೆ. ಆದ್ರೆ ಪೊಲೀಸ್ ತನಿಖೆಯಲ್ಲಿ ಇದರ ಸತ್ಯಾಸತ್ಯತೆ ಕೂಡ ಬಯಲಾಗಬೇಕಿದೆ.

- Advertisement -

Related news

error: Content is protected !!