Saturday, June 28, 2025
spot_imgspot_img
spot_imgspot_img

ಮಂಗಳೂರು: ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಬೈಕ್ ಹಾಗೂ ಸಿಟಿ ಬಸ್.!

- Advertisement -
- Advertisement -

ಮಂಗಳೂರು: ಅಪಘಾತ ಸಂಭವಿಸಿ ಬೆಂಕಿ ತಗುಲಿದ ಪರಿಣಾಮ ಸಿಟಿ ಬಸ್ ಹಾಗೂ ಬೈಕ್ ಹೊತ್ತಿ ಊರಿದ ಘಟನೆ ನಗರದ ಹಂಪನಕಟ್ಟೆ ಬಳಿಯ ವೆನ್ಲಾಕ್ ಆಸ್ಪತ್ರೆ ಬಳಿ ಏ.8ರ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಮಾಹಿತಿ ಪ್ರಕಾರ ಬೈಕ್ ಬಂದು ಬಸ್‌ಗೆ ಢಿಕ್ಕಿ ಹೊಡೆದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು, ಬಸ್ಸು ಹಾಗೂ ಬೈಕ್ ಎರಡು ವಾಹನಕ್ಕೂ ಬೆಂಕಿ ತಗುಲಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಅಗ್ನಿ ಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ವ್ಯಾಪಿಸುವುದನ್ನು ತಡೆದಿದ್ದು, ಖಾಸಗಿ ಬಸ್ ಬಹುಪಾಲು ಸುಟ್ಟು ಹೋಗಿದೆ. ಬೈಕ್ ಸಂಪೂರ್ಣವಾಗಿ ಸುಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!