Monday, April 29, 2024
spot_imgspot_img
spot_imgspot_img

ಮಂಗಳೂರು: ಪ್ರಯಾಣಿಕರಿಗೆ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಜುಲೈ 7ರಿಂದ ಯಶವಂತಪುರ- ಮಂಗಳೂರು ನಡುವೆ ವಿಸ್ಟಾಡೋಮ್ ಬೋಗಿ ಆರಂಭ!

- Advertisement -G L Acharya panikkar
- Advertisement -

ಮಂಗಳೂರು: ರೈಲಿನಲ್ಲಿ ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸ್ಟಾಡೋಮ್ ಬೋಗಿಗಳು ಯಶವಂತಪುರ- ಮಂಗಳೂರು ನಡುವೆ ಜುಲೈ 7ರಿಂದ ಸೇರ್ಪಡೆಗೊಳ್ಳಲಿವೆ. ಪ್ರಯಾಣಿಕರಿಗೆ ಈ ವಿಶೇಷ ಬೋಗಿಯು ಪಶ್ಚಿಮ ಘಟ್ಟದ ನಡುವೆ ಸಂಚರಿಸುವ ಸಂದರ್ಭ ರೈಲು ಪ್ರಕೃತಿಯ ರಮಣೀಯ ಸೌಂದರ್ಯವನ್ನು ಕಣ್ತುಂಬಿಸುವ ಅವಕಾಶವನ್ನು ನೀಡಲಿದೆ.

ಈ ವಿಶೇಷ ರೈಲು ಸಂಚಾರಕ್ಕೆ ಜು.3ರಿಂದ ಬುಕಿಂಗ್ ಆರಂಭವಾಗಿದ್ದು, ಯಶವಂತಪುರದಿಂದ ಮಂಗಳೂರಿಗೆ ಪ್ರಸಕ್ತ 1,470 ರೂ. ದರ ನಿಗದಿಪಡಿಸಲಾಗಿದ್ದು, ರಿಸರ್ವೇಶನ್, ಜಿಎಸ್‌ಟಿ ಸೇರಿ ಒಬ್ಬ ಪ್ರಯಾಣಿಕನಿಗೆ ಅಂದಾಜು 1600 ರೂ. ದರ ಇರಲಿದೆ. ಪಶ್ಚಿಮಘಟ್ಟ ಮತ್ತು ಕರಾವಳಿ ಭಾಗದಲ್ಲಿ ಸಂಚರಿಸುವ ಮೂರು ರೈಲುಗಳ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿಯನ್ನು ತೆಗೆದು ತಲಾ ಎರಡು ವಿಸ್ಟಾಡೋಮ್ ಕೋಚ್‌ಗಳನ್ನು ಜೋಡಿಸಲಾಗುತ್ತದೆ. ಒಂದು ಕೋಚ್‌ನಲ್ಲಿ 44 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಎರಡು ವಿಸ್ಟಾಡೋಮ್ ಕೋಚ್ ಅಳವಡಿಕೆಯಾಗಲಿರುವುದರಿಂದ ಒಂದು ಬಾರಿಗೆ 88 ಪ್ರಯಾಣಿಕರು ಸಂಚರಿಸಬಹುದು.

ಪ್ರಯಾಣಿಕರಿಗೆ ಪ್ರಾಕೃತಿಕ ಸೊಬಗನ್ನು ಸವಿಯಲು ಬೆಂಗಳೂರು-ಮಂಗಳೂರು ನಡುವೆ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಹಾದುಹೋಗುವ 55 ಕಿ.ಮೀ. ರೈಲು ಮಾರ್ಗ ಪ್ರಯಾಣಿಕರಿಗೆ ದರ್ಶನವನ್ನು ನೀಡುತ್ತದೆ. ಮಾರ್ಗಮಧ್ಯದಲ್ಲಿ ಅರಣ್ಯ, ಜಲಪಾತ, ಸುರಂಗ, ಸೇತುವೆಗಳ ರಮಣೀಯ ನೋಟವನ್ನು ಪ್ರಯಾಣಿಕರು ಆಸ್ವಾದಿಸಬಹುದು. ಸದ್ಯ ಮಳೆಗಾಲ ಕೂಡ ಆರಂಭವಾಗಿರುವುದರಿಂದ ಪ್ರಕೃತಿಯ ಸೊಬಗು ಮತ್ತಷ್ಟು ರೋಮಾಂಚನಕಾರಿಯಾಗಲಿದೆ.

ವಾರಕ್ಕೆ 3 ಬಾರಿ ಚಲಿಸುವ ಈ ವಿಶೇಷ ರೈಲು ಯಶವಂತಪುರ- ಕಾರವಾರ (ರೈಲ್ವೆ ನಂ. 06211 /06212), ಯಶವಂತಪುರ- ಮಂಗಳೂರು (ರೈಲ್ವೆ ನಂ. 06575/06576), ಯಶವಂತಪುರ -ಮಂಗಳೂರು (ರೈಲ್ವೆ ನಂ. 06539) ಹಾಗೂ ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್‌ಪ್ರೆಸ್‌ನಲ್ಲಿ (ರೈಲ್ವೆ ನಂ. 06540 ) ವಿಸ್ಟಾಡೋಮ್ ಬೋಗಿ ಸೇರ್ಪಡೆಯಾಗಲಿವೆ. ಈ ವಿಸ್ಟಾಡೋಮ್ ಕೋಚ್ ಗಾಜಿನ ದೊಡ್ಡ ಚಾವಣಿ ಒಳಗೊಂಡಿದೆ. 180 ಡಿಗ್ರಿ ಕೋನದಲ್ಲಿ ಸುತ್ತುವ ಸುಖಾಸನಗಳು ಇರಲಿವೆ. ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೊ ಓವನ್, ಪುಟ್ಟರೆಫ್ರಿಜರೇಟರ್‌ಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದ್ದು, ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಈ ವಿಸ್ಟಾಡೋಮ್ ಬೋಗಿ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ.

- Advertisement -

Related news

error: Content is protected !!