Wednesday, May 1, 2024
spot_imgspot_img
spot_imgspot_img

ಮಂಗಳೂರು: ಮಹಿಳೆಯರ ಸುರಕ್ಷತೆಗೆ ಟಾಸ್ಕ್ ಫೋರ್ಸ್ ರಚಿಸುವ ಬಗ್ಗೆ ಪೊಲೀಸ್ ಆಯುಕ್ತರಿಗೆ ವಿ.ಹಿಂ.ಪ ದುರ್ಗಾವಾಹಿನಿ ಮನವಿ!

- Advertisement -G L Acharya panikkar
- Advertisement -
driving

ಮಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಕೆಲಸ ಬಿಟ್ಟು ಮನೆಗೆ ಹೋಗುವ ಮಹಿಳೆಯರ ಮೈಮೇಲಿನ ಚಿನ್ನದ ಆಭರಣಗಳನ್ನು ಕಸಿಯುವ ಕೆಲಸ, ಅಲ್ಲದೆ ಅವರ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ, ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಹಾಕುವ ಕೃತ್ಯ,

ಅಲ್ಲದೆ ಅಪ್ರಾಪ್ತ ಬಾಲಕಿಯರಿಗೆ ಫೋನ್ ಮೂಲಕ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿದ್ದು ಇದನೆಲ್ಲ ತಾವುಗಳು ಪರಿಶೀಲಿಸಿ ನಿಮ್ಮ ನೇತೃತ್ವದಲ್ಲಿ ಮಹಿಳಾ ಸುರಕ್ಷತೆಗೆ ಒಂದು ಪಡೆಯನ್ನು (ಟಾಸ್ಕ್ ಫೋರ್ಸ್) ರಚಿಸಿ ಮಹಿಳೆಯರ ರಕ್ಷಣೆ ಮಾಡಬೇಕೆಂದು ಪೊಲೀಸ್ ಆಯುಕ್ತರ ಬಳಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಭಾಗ ಮಾತೃಶಕ್ತಿ ಪ್ರಮುಖ್ ಶ್ರೀಮತಿ ಸುರೇಖಾ ರಾಜ್, ಜಿಲ್ಲಾ ಮಾತೃಶಕ್ತಿ ಸಹ ಪ್ರಮುಖ್ ಶ್ರೀಮತಿ ನಯನ ತೇಜ್, ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಶ್ರೀಮತಿ ಶ್ವೇತಾ ಅದ್ಯಪಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

Related news

error: Content is protected !!