Monday, June 30, 2025
spot_imgspot_img
spot_imgspot_img

ಮಂಗಳೂರು: ಮೀನುಗಾರನನ್ನು ತಲೆ ಕೆಳಗೆ ನೇತು ಹಾಕಿ ಹಲ್ಲೆ.!!

- Advertisement -
- Advertisement -
vtv vitla
vtv vitla

ಮಂಗಳೂರು: ಮೀನುಗಾರನೊಬ್ಬನನ್ನು ತಲೆಕೆಳಗೆ ಮಾಡಿ ನೇತು ಹಾಕಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

vtv vitla
vtv vitla

ಹಲ್ಲೆಗೊಳಗಾದ ಮೀನುಗಾರ ಆಂದ್ರ ಪ್ರದೇಶ ಮೂಲದ ವೈಲ ಶೀನು ಎನ್ನಲಾಗಿದೆ. ಮಂಗಳೂರಿನಲ್ಲಿ ಮೀನುಗಾರಿಕಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಮಂಗಳೂರಿನ ಧಕ್ಕೆಯಲ್ಲಿ ಮೀನುಗಾರರೊಬ್ಬರ ಮೊಬೈಲ್ ಕಳೆದು ಹೋಗಿತ್ತು. ಇದನ್ನು ವೈಲ ಶೀನು ಕದ್ದಿದ್ದಾನೆ ಎಂದು ಆರೋಪಿಸಿ ಆತನನ್ನು ಮೀನುಗಾರಿಕಾ ಬೋಟ್ ನಲ್ಲಿ ಆತನ ಕಾಲಿಗೆ ಹಗ್ಗಕಟ್ಟಿ ತಲೆಕೆಳಗೆ ಮಾಡಿ ನೇತುಹಾಕಿ ವಿಚಾರಣೆ ನಡೆಸಿದ್ದಾರೆ.

ಇವರೆಲ್ಲರೂ ಆಂಧ್ರಪ್ರದೇಶ ಮೂಲದ ಕಾರ್ಮಿಕರಾಗಿದ್ದಾರೆ. ಈ ವಿಡಿಯೋ ಕೆಲವು ದಿನಗಳ ಹಿಂದೆ ತೆಗೆಯಲಾಗಿದ್ದು, ಇದೀಗ ವೈರಲ್ ಆಗಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!