Sunday, May 19, 2024
spot_imgspot_img
spot_imgspot_img

ಮಂಗಳೂರು: ಮೂರು ಶೂಟೌಟ್ ಪ್ರಕರಣದ ಆರೋಪಿ ಬನ್ನಂಜೆ ರಾಜನಿಗೆ ಬಿಗ್ ರಿಲೀಫ್‌..! ಭೂಗತ ಪಾತಕಿ ದೋಷಮುಕ್ತ

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರಿನಲ್ಲಿ ದಾಖಲಾಗಿದ್ದ 3 ಶೂಟೌಟ್‌ ಪ್ರಕರಣಗಳಲ್ಲಿ ಬನ್ನಂಜೆರಾಜನನ್ನು ಖುಲಾಸೆಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

2000ನೇ ಇಸವಿಯಲ್ಲಿ ಬಂಟ್ಸ್‌ ಹಾಸ್ಟೆಲ್‌ ನಿವಾಸಿ ಇರವಿನ್‌ ಪಿಂಟೋ ಮತ್ತು ಅವರ ಪತ್ನಿ ರಾತ್ರಿ ಮದುವೆ ಸಮಾರಂಭಕ್ಕೆ ಹೋಗಿ ಮನೆಗೆ ವಾಪಸಾಗುವ ವೇಳೆ ಹೊಯ್ಗೆ ಬಜಾರ್‌ ಬಳಿ ಬೈಕ್‌ ನಲ್ಲಿ ಬಂದಂತಹ ಅಪರಿಚಿತರು ಕಾರನ್ನು ಅಡ್ಡಗಟ್ಟಿ ಶೂಟೌಟ್‌ ಮಾಡಿ ಕೊಲೆ ಯತ್ನ ನಡೆಸಿ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಪಾಂಡೇಶ್ವರ ಪೊಲೀಸ್‌ಠಾಣೆಯಲ್ಲಿ ಬನ್ನಂಜೆರಾಜ ಮತ್ತು ಆತನ ಸಹಚರರ ಮೇಲೆ ಪ್ರಕರಣ ದಾಖಲಾಗಿತ್ತು.

2004ನೇ ಇಸವಿಯಲ್ಲಿ ರೋಹನ್‌ ಕಾರ್ಪೋರೇಶನ್‌ ಮಾಲಕ ರೋಹನ್‌ ಮೊಂತೇರೋ ಅವರ ಕಚೇರಿಯ ಮೇಲೆ ಅಪರಿಚಿತರು ಗುಂಡು ಹಾರಿಸಿ, ಕೊಲೆ ಯತ್ನ ನಡೆಸಿ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಬನ್ನಂಜೆರಾಜ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 2011ರಲ್ಲಿ ಪೃಥ್ವಿ ಡೆವಲಪರ್ಸ್‌ ಮತ್ತು ಬಿಲ್ದರ್ಸ್‌ನ ಮಾಲಕ ಸುರೇಶ ಭಂಡಾರಿ ಅವರು ತನ್ನ ಹೆಂಡತಿ ಮತ್ತು ಮಗಳೊಂದಿಗೆ ಕದ್ರಿ ಪಾರ್ಕ್‌ ಬಳಿ ಕಾರಿನಲ್ಲಿದ್ದ ಸಮಯ ಇಬ್ಬರು ಅಪರಿಚಿತರು ಬೆ„ಕ್‌ನಲ್ಲಿ ಬಂದು ರಿವಾಲ್ವರ್‌ನಿಂದ ಶೂಟೌಟ್‌ ಮಾಡಿ ಕೊಲೆ ಯತ್ನ ನಡೆಸಿದ್ದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಮೂರೂ ಪ್ರಕರಣಗಳಲ್ಲಿ ಪೊಲೀಸರು ತನಿಖೆ ನಡೆಸಿ ಬನ್ನಂಜೆರಾಜ ಮತ್ತು ಆತನ ಸಹಚರರ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಘಟನೆಗಳ ಸಮಯ ಬನ್ನಂಜೆರಾಜ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. 2015ನೇ ಇಸವಿಯಲ್ಲಿ ಆಫ್ರಿಕಾದ ಮೊರಾಕೋ ದೇಶದಲ್ಲಿ ಆತನನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ನಂತರ ಆತನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಮೂರು ಪ್ರಕರಣಗಳಲ್ಲಿ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಅವರು ಬನ್ನಂಜೆ ರಾಜನನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪರವಾಗಿ ಪಿ.ಪಿ ಹೆಗ್ಡೆ ಅಸೋಸಿಯೇಟ್‌ನ ರಾಜೇಶ್‌ಕುಮಾರ್‌ ಅಮ್ಡಾಡಿ ಅವರು ವಾದಿಸಿದ್ದರು. ಬನ್ನಂಜೆರಾಜನ ವಿರುದ್ಧ ಒಂದು ನಕಲಿ ಪಾಸ್‌ ಪೋರ್ಟ್‌ ಹೊಂದಿದ್ದ ಬಗ್ಗೆ ಮತ್ತು ಒಂದು ಇ.ಡಿ ಪ್ರಕರಣದ ತನಿಖೆ ಬಾಕಿ ಇರುತ್ತದೆ. ಮಂಗಳೂರಿನಲ್ಲಿ ಬನ್ನಂಜೆರಾಜನ ಮೇಲೆ ದಾಖಲಾಗಿದ್ದ ದಾಖಲಾಗಿದ್ದ ಉಳಿದ ಎಲ್ಲ ಪ್ರಕರಣಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯರದ್ದು ಗೊಳಿಸಿದ್ದು, ಹೈಕೋರ್ಟ್‌ ನಲ್ಲಿ ವಕೀಲ ಪಿ.ಪಿ.ಹೆಗ್ಡೆ ವಾದಿಸಿದ್ದರು.

- Advertisement -

Related news

error: Content is protected !!