Sunday, May 19, 2024
spot_imgspot_img
spot_imgspot_img

ಮಂಗಳೂರು: ಮೂರ್ತಿ ಪ್ರತಿಷ್ಠಾಪನೆಯಲ್ಲಿ ಅಪಚಾರ: 2,000 ವರ್ಷಗಳ ಹಿಂದಿನ ವಿಗ್ರಹ ಬಿಟ್ಟು ಬೇರೆಯೇ ಮೂರ್ತಿ ಪ್ರತಿಷ್ಠಾಪಿಸಿ ಅಪಚಾರ..!

- Advertisement -G L Acharya panikkar
- Advertisement -

ಮಂಗಳೂರು: ಕದ್ರಿ ಜೋಗಿ (ಯೋಗೀಶ್ವರ) ಮಠದಲ್ಲಿ ದೇವಸ್ಥಾನದಲ್ಲಿದ್ದ 2,000 ವರ್ಷಗಳ ಹಿಂದಿನ ಕಾಲಭೈರವ ದೇವರ ವಿಗ್ರಹ ಪುನರ್ ಪ್ರತಿಷ್ಠೆ ಮಾಡದೆ, ರಾಜಸ್ಥಾನದಿಂದ ವ್ಯಾಪಾರಿಗಳು ತಂದ ಕಾಲಭೈರವ ದೇವರ ಸಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅಪಚಾರ ಎಸಲಾಗಿದೆ. ಇದು ಅಕ್ಷಮ್ಯ ಅಪರಾಧ ಎಂದು ಕದ್ರಿ (ಯೋಗೀಶ್ವರ) ಮಠ ಜೀರ್ಣೋದ್ಧಾರ ಮತ್ತು ಕಾರ್ಯನಿರ್ವಹಣಾ ಸಮಿತಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ, ಮಾಜಿ ಮೇಯರ್ ಕೆ. ಹರಿನಾಥ್ ಜೋಗಿ ಅವರು, ನಾಥ ಪಂಥದ ಆರಾಧ್ಯ ದೇವರಾದ ಕದ್ರಿ ಜೋಗಿ ಮಠದ ಕಾಲಭೈರವ ದೇವಸ್ಥಾನದ ಕಾಲಭೈರವ ದೇವರ ವಿಗ್ರಹದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಯೋಗೀಶ್ವರ ಮಠಾಧಿಪತಿ ನಿರ್ಮಲನಾಥಜೀ ಮಾರ್ಗದರ್ಶನದಲ್ಲಿ ಇತ್ತೀಚೆಗೆ ನಡೆದಿದೆ. ಈ ಸಂದರ್ಭದಲ್ಲಿ ಈ ಅಪಚಾರ ನಡೆದಿದೆ ಎಂದರು.

ಕಾಲಭೈರವನ ವಿಗ್ರಹವನ್ನು ಸುಮಾರು ₹70 ಲಕ್ಷಕ್ಕೆ ಮಾರಾಟಕ್ಕೆ ಯತ್ನ..!
ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಮಠದಲ್ಲಿರುವ ಪುರಾತನ ವಿಗ್ರಹಗಳಾದ ಜ್ವಾಲಾ ಮಹಮ್ಮಾಯ, ಮಹಾಕಾಳಿ ಸೇರಿದಂತೆ ಇತರ ಮೂರ್ತಿಗಳನ್ನು ಮರು ಪ್ರತಿಷ್ಠಾಪಿಸದೆ ಬಿಸಾಡಲಾಗಿದೆ. ಪ್ರತಿಷ್ಠಾಪಿಸದೆ ಮಠದ ಆವರಣದಲ್ಲಿ ಇಟ್ಟಿರುವ ಕಾಲಭೈರವ ದೇವರ ವಿಗ್ರಹವನ್ನು ಕೂಡಲೇ ಪ್ರತಿಷ್ಠಾಪಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು. ಈಗ ಹೊರಗಿಟ್ಟಿರುವ ಕಾಲಭೈರವನ ವಿಗ್ರಹವನ್ನು ಸುಮಾರು ₹70 ಲಕ್ಷಕ್ಕೆ ಮಾರಾಟ ಮಾಡಲು ಈಗಿನ ಪೀಠಾಧಿಪತಿ ಯತ್ನಿಸಿದ್ದರು. ಇದು ಗಮನಕ್ಕೆ ಬಂದಾಗ ಮಾರಾಟದ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದರು.

ದೇವಸ್ಥಾನಕ್ಕೆ ಹೊಸ ಗರ್ಭಗುಡಿ ಮತ್ತು ಸುತ್ತುಪೌಳಿಯನ್ನು ನಿರ್ಮಾಣ ಮಾಡುವಾಗ 2014ರಲ್ಲಿ ಜೋಗಿ ಮಠದ ಸಮಿತಿ ನಿರ್ಮಿಸಿದ್ದ ಸುತ್ತುಪೌಳಿ ಹಾಗೂ ಆವರಣ ಗೋಡೆ, ಹಲವಾರು ವರ್ಷಗಳಿಂದ ಇದ್ದ ಮೂರ್ತಿಗಳನ್ನು ಮಠಾಧೀಶರು ಧ್ವಂಸ ಮಾಡಿದ್ದಾರೆ. ಈ ಕುರಿತು ಮಠಾಧೀಶರನ್ನು ವಿಚಾರಿಸಿದಾಗ ಅವಾಚ್ಯ ‍ಪದಗಳಿಂದ ನಿಂದಿಸಿದ್ದಾರೆ. ನ್ಯಾಯಾಲಯದಿಂದ ತಡೆ ತರುವ ಪ್ರಯತ್ನ ನಡೆದಿದ್ದರೂ ಅದು ಸಾಧ್ಯವಾಗಿಲ್ಲ ಎಂದರು.

ರಾಜಾ ಸಂಧ್ಯಾನಾಥ ಜೀ ಮಠವನ್ನು ನಡೆಸುತ್ತಿರುವ ತನಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಠದ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದರು. ಮಠದ ಗೊಂದಲಗಳಿಗೆ ಸಂಬಂಧಿಸಿ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈ ಪ್ರಕ್ರಿಯೆಗೆ ಈಗಾಗಲೇ ಎಂಟು ವರ್ಷಗಳಾಗಿದೆ. ಇಲ್ಲಿಯ ತನಕ ನ್ಯಾಯಬದ್ಧ ಆದೇಶ ಬಂದಿಲ್ಲ. ಮಠಾಧಿಪತಿ ಉದ್ಧಟತನದ ಕುರಿತು ಈಗಾಗಲೇ ಜಿಲ್ಲಾಧಿಕಾರಿ, ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಜಿಲ್ಲೆಯ ಎಲ್ಲ ಮಠಾಧೀಶರು ಗಮನಹರಿಸಿ ನ್ಯಾಯ ಒದಗಿಸುವ ಮೂಲಕ ಊರಿನವರು, ಮಠಾಧೀಶರು ಹಾಗೂ ಶಿಷ್ಯ ವರ್ಗದ ನಡುವೆ ಧಾರ್ಮಿಕ ಸಂಘರ್ಷ ಏರ್ಪಡದಂತೆ ಸಹಕರಿಸಬೇಕು ಎಂದು ಕೋರಿದರು.

- Advertisement -

Related news

error: Content is protected !!