Thursday, May 2, 2024
spot_imgspot_img
spot_imgspot_img

ಮಂಗಳೂರು: ಮೋದಿ ಹತ್ಯೆಗೆ ಸ್ಕೆಚ್ ಹಾಕಿದವರ ಜೊತೆ ರಿಯಾಜ್ ಫರಂಗಿಪೇಟೆ ನಂಟು.!? NIA ದಾಳಿ ವೇಳೆ ಸ್ಪೋಟಕ ಅಂಶ ಬಯಲು.?

- Advertisement -G L Acharya panikkar
- Advertisement -

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹತ್ಯೆಗೆ ಷಡ್ಯಂತ್ರ ನಡೆದಿದ್ದ ಪ್ರಕರಣದಲ್ಲಿ ಸ್ಕೆಚ್ ಹಾಕಿದವರ ಜತೆ ರಿಯಾಜ್ ಫರಂಗಿಪೇಟೆಗೆ ನಂಟು ಇದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇದೇ ಕಾರಣಕ್ಕೆ ಎನ್​ಐಎ ದಾಳಿ ನಡೆಸಿದೆ.! ದಾಳಿ ವೇಳೆ ಸ್ಪೋಟಕ ಅಂಶ ಬಯಲಾಗಿದೆ ಎನ್ನಲಾಗಿದೆ.

ಎರಡು ತಿಂಗಳ ಹಿಂದೆ ಬಿಹಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರ್‍ಯಾಲಿಯ ವೇಳೆ ಅವರ ಹತ್ಯೆಗೆ ಷಡ್ಯಂತ್ರ ನಡೆದಿತ್ತು. ಈ ಪ್ರಕರಣದ ತನಿಖೆ ಕೆಗೆತ್ತಿಕೊಂಡಿರುವ ಎನ್ ಐ ಎ ಈಗಾಗಲೇ ಹಲವು ಆರೋಪಿಗಳನ್ನು ಬಿಹಾರದಲ್ಲಿ ಬಂಧಿಸಿದೆ. ಆದರೇ ಈ ಹತ್ಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಯು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ NIA ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿಸಿರೋಡ್ ನಲ್ಲಿರುವ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯನ ಮನೆಗೆ ದಾಳಿ ನಡೆಸಿರುವುದಾಗಿ ಮೂಲಗಳಿಂದ ತಿಳಿದು . ಇಂದು ಬೆಳ್ಳಂಬೆಳಿಗ್ಗೆ ಬಿ.ಸಿ.ರೋಡ್ ಬಳಿಯ ಪರ್ಲಿಯಾ ಎಂಬಲ್ಲಿರುವ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರಿಯಾಜ್ ಫರಂಗಿಪೇಟೆ ಮನೆಗೆ NIA ದಾಳಿ ನಡೆಸಿ ಶೋಧ ಕಾರ್ಯಚರಣೆ ನಡೆಸಿದೆ. ಈ ವೇಳೆ SDPI ಕಾರ್ಯಕರ್ತರು ಮನೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸುವ ಯತ್ನ ನಡೆಸಿದರಾದರೂ, ಬಂಟ್ವಾಳ ಪೊಲೀಸರು ಇದನ್ನು ತಡೆದು, ಪ್ರತಿಭಟನಕಾರರನ್ನು ವಾಪಸ್ಸು ಕಳುಹಿಸಿದರು.

ಆರಂಭದಲ್ಲಿ ರಿಯಾಜ್ ಮನೆ ಮೇಲೆ ದಾಳಿಯಾದಾಗ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ವರದಿಯಾಗಿತ್ತು. ಆದರೇ ಇದೀಗ ಈ ದಾಳಿ ಆ ಪ್ರಕರಣಕ್ಕೆ ಸಂಬಂಧಿಸಿ ನಡೆದಿರುವುದಲ್ಲ. ಇದು ಬಿಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ದಾಳಿ ಎಂದು ಮೂಲಗಳು ತಿಳಿಸಿವೆ. ಎನ್‌ಐಎ ಅಧಿಕಾರಿಗಳು ರಿಯಾಜ್ ಮೊಬೈಲ್ ಪೋನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದು ಮನೆಯ ಇಂಚು ಇಂಚು ತಪಾಸಣೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಮೋದಿ ಹತ್ಯೆ ಪ್ರಕರಣದಲ್ಲಿ ಬಿಹಾರದಲ್ಲಿ ಬಂಧಿಸಲ್ಪಟ್ಟಿರುವ ಅಖರ್ ಪರ್ವೇಜ್ ಮತ್ತು ಮಹಮ್ಮದ್ ಜಲಾಲುದ್ದೀನ್ ನೊಂದಿಗೆ ರಿಯಾಜ್ ಫರಂಗಿಪೇಟೆ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಲಭಿಸಿದ ಹಿನ್ನಲೆಯಲ್ಲಿ ಎನ್ ಐಎ ಈ ದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿವೆ. ಕಾರ್ಯಕಾರಣಿ ಸದಸ್ಯನ ಕೈವಾಡ ಇದೆ ಎನ್ನುವ ಸುದ್ದಿ ಜನರ ಆತಂಕಕ್ಕೆ ಕಾರಣವಾಗಿದೆ.

astr
- Advertisement -

Related news

error: Content is protected !!