Monday, June 30, 2025
spot_imgspot_img
spot_imgspot_img

ಮಂಗಳೂರು: ರಾತ್ರೋ ರಾತ್ರಿ ಇಬ್ಬರು ಸಹೋದರಿಯರು ಮನೆಯಿಂದ ನಾಪತ್ತೆ; ದೂರು ದಾಖಲು..!

- Advertisement -
- Advertisement -
vtv vitla
vtv vitla

ಮಂಗಳೂರು: ರಾತ್ರಿ ಮಲಗಿದ್ದ ಜಾಗದಿಂದಲೇ ಸಹೋದರಿಯರಿಬ್ಬರು ನಾಪತ್ತೆಯಾಗಿರುವ ಘಟನೆ‌ ನಗರದ ಬಜ್ಪೆಯ ಕೊಂಚಾರ್ ಎಂಬಲ್ಲಿ ನಡೆದಿದೆ.

ನಾಪತ್ತೆಯಾದ ಸಹೋದರಿಯರು ಬಜ್ಪೆಯ ಕೊಂಚಾರ್ ಎಂಬಲ್ಲಿನ ಬಾಡಿಗೆ ಮನೆ ನಿವಾಸಿಗಳಾದ ಮುಬೀನಾ(22) ಹಾಗೂ ಬುಶ್ರಾ (21) ಎನ್ನಲಾಗಿದೆ.

ಫೆ.7ರಂದು ರಾತ್ರಿ ಮುಬೀನಾ ಹಾಗೂ ಬುಶ್ರಾ ಸುಮಾರು 12.30ಕ್ಕೆ ಊಟ ಮಾಡಿ ಮನೆಯಲ್ಲಿ ಮಲಗಿದ್ದರು. ತಡರಾತ್ರಿ 2 ಗಂಟೆಗೆ ಅವರ ತಂದೆ ಎದ್ದು ನೋಡಿದಾಗ ಕಿರಿಯ ಪುತ್ರಿ ಬುಶ್ರಾ ಮನೆಯಲ್ಲಿ ಕಂಡಿರಲಿಲ್ಲ. ಇದರಿಂದ ಎಲ್ಲ ಕಡೆಗಳಲ್ಲಿ ಹುಡುಕಾಟ ನಡೆಸಲಾಗಿದೆ. ಈ ಸಂದರ್ಭ ಮತ್ತೋರ್ವ ಪುತ್ರಿ ಮುಬೀನಾ ಕೂಡಾ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಎಲ್ಲೆಡೆ ಹುಡುಕಾಟ ನಡೆಸಿದ್ರೂ, ಇಬ್ಬರೂ ಪತ್ತೆಯಾಗಿಲ್ಲ ಎಂದು ಬಜ್ಪೆ ಠಾಣೆಯಲ್ಲಿ ಹೆತ್ತವರು ದೂರು ದಾಖಲಿಸಿದ್ದಾರೆ. ಈ ಘಟನೆ ಬಗ್ಗೆ ಬಜ್ಪೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!