Monday, April 29, 2024
spot_imgspot_img
spot_imgspot_img

ಮಂಗಳೂರು: ವಿವಿಧೆಡೆ ಮದ್ಯ ಮಾರಾಟ ಬಂದ್‌..!!

- Advertisement -G L Acharya panikkar
- Advertisement -

ಮಂಗಳೂರು: ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮ ಪಂಚಾಯತ್‍ಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ, ಮತದಾನದ ದಿನದಂದು ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುದು-1ರಿಂದ 10 ಕ್ಷೇತ್ರಗಳು, ಬಂಟ್ವಾಳ ತಾಲೂಕಿನ 43-ಅನಂತಾಡಿಯ ಗ್ರಾಮ ಪಂಚಾಯತ್‍ನ 2-ಅನಂತಾಡಿ, ಕಡಬ ತಾಲೂಕಿನ ಕಟ್ರುಪಾಡಿ ಗ್ರಾಮ ಪಂಚಾಯತ್‍ನ 1-ಬಲ್ಯ ಹಾಗೂ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ 4-ಆರ್ಯಾಪುವಿನಲ್ಲಿ ಫೆಬ್ರವರಿ 24 ಮತ್ತು ಫೆಬ್ರವರಿ 25ರವರೆಗೆ ಚುನಾವಣೆ ನಡೆಯಲಿದೆ.

ಹೀಗಾಗಿ ಚುನಾವಣೆ ನಡೆಯುವ ದಿನವಾದ ಫೆಬ್ರವರಿ 24ರ ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 25ರ ಸಂಜೆ ಚುನಾವಣೆ ಮುಗಿಯುವವರೆಗೆ ಈ ಭಾಗಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಆದೇಶಿಸಿದ್ದಾರೆ.

- Advertisement -

Related news

error: Content is protected !!