Monday, June 8, 2026
spot_imgspot_img
spot_imgspot_img

ಮಂಗಳೂರು: ಸ್ನೇಹಿತರ ಮದುವೆಗೆಂದು ಹೋದ ಯುವತಿ ನಾಪತ್ತೆ

- Advertisement -
- Advertisement -

ಮಂಗಳೂರು: ಸ್ನೇಹಿತರ ಮದುವೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಯುವತಿಯೋರ್ವಳು ನಾಪತ್ತೆಯಾದ ಘಟನೆ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಯುವತಿಯನ್ನು ರಾಬಿಯಾ ಪರ್ವೀನ್ (22) ಎಂದು ಗುರುತಿಸಲಾಗಿದೆ.

ರಾಬಿಯಾ ಪರ್ವೀನ್ ನಗರದ ಲೇಡಿಗೋಶನ್ ಬಳಿಯ ಟೈಲರಿಂಗ್ ಮೆಶಿನ್‌ನ ರಿಪೇರಿ/ ಸೇಲ್ಸ್ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಸುಮಾರು 8 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದಳು. ರಾಬಿಯಾ ಪರ್ವೀನ್ ಎಂದಿನಂತೆ ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದು, ಸಂಜೆ 4:30 ಗಂಟೆಗೆ ಕೆಲಸ ಮಾಡುವ ಸ್ಥಳದಿಂದ ಬಂದರಿನಲ್ಲಿರುವ ಸ್ನೇಹಿತರ ಮದುವೆಗೆ ಹೋಗಿಬರುತ್ತೇನೆಂದು ಹೇಳಿ ಹೋದವಳು ವಾಪಾಸ್ಸು ಬಂದಿರುವುದಿಲ್ಲ.

ನಾಪತ್ತೆಯಾದಾಗಿನಿಂದ ಫೋನ್ ಕರೆ ಮಾಡಿದಾಗ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಆಕೆಯ ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗ ನಾಪತ್ತೆ ಬಗ್ಗೆ ಯಾರಿಗೂ ಮಾಹಿತಿ ಇರುವುದಿಲ್ಲ. ಈ ಬಗ್ಗೆ ನಗರ ಉತ್ತರ (ಬಂದರು) ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!