Monday, June 22, 2026
spot_imgspot_img
spot_imgspot_img

ಮಂಗಳೂರು ಸ್ಫೋಟ ಪ್ರಕರಣ; ಶಾರಿಕ್‌ ಮನೆಗೆ ಪೊಲೀಸ್‌ ದಾಳಿ

- Advertisement -
- Advertisement -

ಮಂಗಳೂರು: ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರಿಕ್ ಮನೆ ಮೇಲೆ ಇಂದು ಮುಂಜಾನೆ ಪೊಲೀಸರು ದಾಳಿ ಮಾಡಿದ್ದು, ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸೊಪ್ಪುಗುಡ್ಡೆಯಲ್ಲಿರುವ ಶಾರಿಕ್ ಮನೆಗೆ ದಾಳಿ ನಡೆದಿದೆ. ಕುಕ್ಕರ್ ಸ್ಪೋಟ ಪ್ರಕರಣದಲ್ಲಿ ಶಾರಿಕ್ ಆರೋಪಿ ಎನ್ನಲಾಗಿದ್ದು ಮೂರು ಪೊಲೀಸ್ ತಂಡಗಳು ಏಕಕಾಲದಲ್ಲಿ ರೈಡ್ ಮಾಡಿವೆ. ಶಾರಿಕ್ ನ ಸಂಬಂಧಿಯ ಮನೆಯೂ ಸೇರಿ ನಾಲ್ಕು ಮನೆಗಳಿಗೆ ರೈಡ್ ಮಾಡಿರುವ ಪೊಲೀಸ್ ತಂಡ ಮಹತ್ವದ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಮಾಡುತ್ತಿವೆ.

ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ತಂಡಗಳಾಗಿ ಪೊಲೀಸರು ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿ, ಮಾಳೂರು ಹಾಗೂ ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ.

- Advertisement -

Related news

error: Content is protected !!