Sunday, July 6, 2025
spot_imgspot_img
spot_imgspot_img

ಮಂಗಳೂರು: MRPLನ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯ: ಸಂಸದರು, ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಗರಂ; ನೇಮಕಾತಿಗೆ ತಡೆ!

- Advertisement -
- Advertisement -

ಮಂಗಳೂರು: MRPL ನಲ್ಲಿ ಇತ್ತೀಚೆಗೆ ಸುಮಾರು 200 ಕ್ಕೂ ಹೆಚ್ಚು ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಸದರಿ ನೇಮಕಾತಿಯಲ್ಲಿ ಕರ್ನಾಟಕದ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರು, ಸ್ಥಳಿಯ ಶಾಸಕರಾದ, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಹಾಗೂ ಶ್ರೀ ವೇದವ್ಯಾಸ ಕಾಮತ್ ರವರ ಉಪಸ್ಥಿತಿಯಲ್ಲಿ ಎಂಆರ್ ಪಿಎಲ್ ನ ಆಡಳಿತ ನಿರ್ದೇಶರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.

ಸ್ಥಳೀಯರಿಗಾದ ಆನ್ಯಾಯದ ಬಗ್ಗೆ ಎಂಆರ್ ಪಿಎಲ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಲಾಯಿತು ಹಾಗೂ ಸದರಿ ನೇಮಕಾತಿ ಪಟ್ಟಿಯನ್ನು ಕೂಡಲೇ ತಡೆಹಿಡಿಯಲು ಆದೇಶಿಸಲಾಗಿ ಎಂಆರ್ ಪಿಎಲ್ ಆಡಳಿತ ನಿರ್ದೇಶಕರು ಸದರಿ ನೇಮಕಾತಿಯನ್ನು ತಡೆಹಿಡಿಯಲು ಒಪ್ಪಿರುತ್ತಾರೆ.

ನೇಮಕಾತಿಯ ಮುಂದಿನ ಪ್ರಕ್ರಿಯೆಯನ್ನು ಸಂಸದರ, ಉಸ್ತುವಾರಿ ಸಚಿವರ ಹಾಗೂ ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ನಡೆಸಲು ಆದೇಶಿಸಲಾಯಿತು.

- Advertisement -

Related news

error: Content is protected !!