- Advertisement -
- Advertisement -



ಮಣಿಪಾಲ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಮಾಹಿತಿ ಮೇರೆಗೆ ಪೊಲೀಸರು ಮಣಿಪಾಲದ ಶ್ರೀ ಸಾಯಿ ಲಾಡ್ಜ್ ಗೆ ದಾಳಿ ಮಾಡಿದಾಗ ಇಬ್ಬರು ಮಹಿಳೆಯರು ಮತ್ತು ಓರ್ವ ಗಂಡಸು ವಶಕ್ಕೆ ಪಡೆದು ಅವರ ವಶದಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಲಾಡ್ಜ್ ನ ಮೇನೇಜರ್ ಸಂಪತ್ ಕುಮಾರ್ ಮತ್ತು ಕೆಲಸಕ್ಕೆ ಇರುವ ಸಂತೋಷ್ ಮತ್ತು ದಿನೇಶ್ ಎಂಬವರು ಹೆಂಗಸರನ್ನು ಅನೈತಿಕ ವೇಶ್ಯವಾಟಿಕೆ ಚಟುವಟಿಕೆ ಮಾಡುವಂತೆ ರೂಮಿನಲ್ಲಿ ಇರಿಸಿದ್ದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








