Friday, May 3, 2024
spot_imgspot_img
spot_imgspot_img

ಮತ್ತೇ ಚೀನಿ ಆಪ್‌ಗಳ ಮೇಲೆ ಕೇಂದ್ರದ ಕೆಂಗಣ್ಣು ; ಬರೋಬ್ಬರಿ 232 ಆಪ್‌ಗಳು ಬ್ಯಾನ್

- Advertisement -G L Acharya panikkar
- Advertisement -

ನವದೆಹಲಿ : ಚೀನಾ ನಂಟು ಹೊಂದಿರುವ 138 ಬೆಟ್ಟಿಂಗ್ ಆಪ್‌ಗಳು ಮತ್ತು 94 ಸಾಲ ನೀಡಿಕೆ ಆಪ್‌ಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯದಿಂದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಆದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಆಪ್‌ಗಳನ್ನು ಬ್ಲಾಕ್ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಐಟಿ ಕಾಯ್ದೆಯ 69ನೇ ಸೆಕ್ಷನ್ ಅಡಿ, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಅಪಾಯ ಉಂಟುಮಾಡುವ ಅಂಶಗಳನ್ನು ಈ ಆಪ್‌ಗಳು ಹೊಂದಿವೆ ಎನ್ನುವುದು ದೃಢಪಟ್ಟ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಆಪ್‌ಗಳು ಚೀನಾ ಮೂಲದ ಪ್ರಜೆಗಳ ಸೃಷ್ಟಿಯಾಗಿದ್ದು , ಅವರು ಭಾರತೀಯರನ್ನು ನೇಮಕ ಮಾಡಿಕೊಂಡು ಭಾರತದಲ್ಲಿ ಕಾರ್ಯಾಚರಣೆ ನಡೆಸಲು ನಿರ್ದೇಶಕರನ್ನಾಗಿಸುತ್ತಿದ್ದಾರೆ. ಹಣಕಾಸಿನ ಅಗತ್ಯವಿರುವ ಜನರು, ಎಲ್ಲಿಯೂ ಸಾಲ ಸಿಗದೆ ಇದ್ದಾಗ ಈ ಆಪ್‌ಗಳ ಜಾಲಕ್ಕೆ ಬೀಳುತ್ತಾರೆ. ಅವರಿಗೆ ಕಡಿಮೆ ಬಡ್ಡಿ ದರದ ಸಾಲದ ಆಮಿಷವೊಡ್ಡಿ , ಬಳಿಕ ವರ್ಷಕ್ಕೆ ಶೇ 3,000ರವರೆಗೂ ಬಡ್ಡಿ ವಿಧಿಸುವುದನ್ನು ಮಾಡಲಾಗುತ್ತಿದೆ. ಸಾಲಗಾರರಿಗೆ ಬಡ್ಡಿ ಮೊತ್ತವನ್ನು ಪಾವತಿಸಲು ಸಾಧ್ಯವಾಗದೆ ಹೋದಾಗ, ಸಾಲಗಾರರಿಗೆ ಆಪ್‌ಗಳ ಪ್ರತಿನಿಧಿಗಳು ಕಿರುಕುಳ ನೀಡಲು ಆರಂಭಿಸುತ್ತಾರೆ.

ಅವರಿಗೆ ಕೊಳಕು ಸಂದೇಶಗಳನ್ನು ರವಾನಿಸಿ, ಅವರ ತಿರುಚಿದ ಫೋಟೋಗಳನ್ನು ಬಿಡುಗಡೆ ಮಾಡುವುದಾಗಿ ಹಾಗೂ ಅವರ ಸಂಪರ್ಕದಲ್ಲಿರುವ ಜನರಿಗೆ ಸಂದೇಶ ಕಳುಹಿಸುವುದಾಗಿ ಬೆದರಿಕೆ ಒಡ್ಡುತ್ತಾರೆ. ಈ ಸಾಲದ ಸುಳಿಗೆ ಸಿಕ್ಕಾ ಕರಾವಳಿ ಭಾಗ ಹಾಗೂ ದೇಶದ ಅನೇಕ ಕಡೆಗಳ ಅನೇಕರು ಸಾಲ ಅಥವಾ ಬೆಟ್ಟಿಂ ಗ್ ಆಪ್‌ಗಳ ಮೂಲಕ ಹಣ ಮತ್ತು ಜೀವವನ್ನೂ ಕಳೆದುಕೊಂಡಿದ್ದರು. ಹೀಗಾಗಿ ಇಂತಹ ಆಪ್‌ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಅನೇಕ ರಾಜ್ಯಗಳು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಮನವಿ ಮಾಡಿದ್ದವು.

- Advertisement -

Related news

error: Content is protected !!